ಗಾಳಿಪಟ 2 (2021)
ಗಾಳಿಪಟ 2 ಕಥೆ
ಹಿನ್ನಲೆ- ಯೋಗರಾಜ್ ಭಟ್ ನಿರ್ದೇಶನದಲ್ಲಿ 2008 ರಲ್ಲಿ ತೆರೆಕಂಡ `ಗಾಳಿಪಟ' ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನ ಮಧುರ ಕಥೆಯಿಂದ ಮತ್ತು ಸುಮಧುರ ಗೀತೆಗಳಿಂದ ತಂಗಾಳಿ ಬೀಸಿತ್ತು. ಈಗ ಮತ್ತೆ ಯೋಗರಾಜ್ ಭಟ್ `ಗಾಳಿಪಟ 2' ಚಿತ್ರವನ್ನು ಘೋಷಿಸಿದ್ದಾರೆ. ಮೊದಲ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್,ದಿಗಂತ್,ರಾಜೇಶ್ ಕೃಷ್ಣನ್ ಗಾಳಿಪಟ ಹಾರಿಸಿದ್ದರೆ, ಈ ಚಿತ್ರದಲ್ಲಿ ಮೊದಲು ಶರಣ್,ರಿಷಿ, ಪವನ ಕುಮಾರ್ ಗಾಳಿಪಟ ಹಾರಿಸಲಿದ್ದಾರೆ ಎಂಬುದಾಗಿ ನಿರ್ಧಾರವಾಗಿತ್ತು. ಆದರೆ ಸ್ಕ್ರಿಪ್ಟ್ ಬರೆದ ನಂತರ ಮತ್ತೇ ಗಣೇಶ್ ಮತ್ತು ದಿಗಂತ್ ಕತೆಗೆ ಹೆಚ್ಚು ಸೂಕ್ತ ಎಂದು ಚಿತ್ರ ತಂಡ ನಿರ್ಧರಿಸಿತು. ಸೆಪ್ಟೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.. ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ಸೋನಲ್ ಮಾಂಟೆರಿಯೋ ಮತ್ತು ಆದಿತಿ ಪ್ರಭುದೇವ ನಟಿಸುತ್ತಿದ್ದರೆ, ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ. ಮಹೇಶ್ ದಾನಣ್ಣವರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಮೊತ್ತಮೊದಲ ಬಾರಿಗೆ ಯೋಗರಾಜ್ ಭಟ್ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ.ಚಿತ್ರದ ಚಿತ್ರೀಕರಣ ಮಾರ್ಚ್ನಲ್ಲಿ ಆರಂಭವಾಗುವ ನೀರಿಕ್ಷೆಯಿದೆ.ಅನಂತನಾಗ್ ,ಮತ್ತು ರಂಗಾಯಣ ರಘು ಪ್ರಮುಖ ಪೋಷಕ ಪಾತ್ರಗಳಲಿದ್ದಾರೆ. ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿವೆ ಎಂದು ಭಟ್ಟರು ಹೇಳಿದ್ದಾರೆ. ಭಟ್ಟರ ಮುಂದಿನ ಚಿತ್ರದಲ್ಲಿ ಇದೇ ನಿರ್ಮಾಪಕರ ನಿರ್ಮಾಣದಲ್ಲಿ ಶರಣ್ ನಾಯಕನಾಗಿ ನಟಿಸಲಿದ್ದಾರೆ.ಚಿತ್ರದಲ್ಲಿ ಒಬ್ಬ ಕೊರಿಯನ್ ಅಥವಾ ಚೈನೀಸ್ ನಟಿ ನಟಿಸುವ ಕುರಿತು ಮಾಹಿತಿಯಿದೆ. ಬೆಂಗಳೂರು ,ಮಂಡ್ಯ ಮತ್ತು ಧಾರವಾಡ ಮೂಲದ ಮೂರು ಯುವಕರ ಪಯಣದ ಕಥೆಯಿದೆ. ಚಿತ್ರವನ್ನು ಕರ್ನಾಟಕ ಮತ್ತು ಲಂಡನ್ ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ.