ಗಾರುಡಿಗ ಸಿನಿಮಾವನ್ನು ವಿಧ ರಾಘವ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರುದ್ವಿನ್ ವೀರ್ ನಾಯಕನಾಗಿ ಹಾಗೂ ಮಾನಸಾ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅರ್ಚನಾ ಪಿಳ್ಳೇಗೌಡ, ಸೋನು ರಕ್ಷಿ, ಗಿರೀಶ್ ಹಿರಿಯೂರು, ಸಂದೀಪ್ ರಾಜ್‌ಗೋಪಾಲ್ ತಾರಾಗಣದಲ್ಲಿದ್ದಾರೆ. ಎಂ ಸಂಜೀವ್ ರಾವ್ ಸಂಗೀತ ನಿರ್ದೇಶನ ಹಾಗೂ ಅನಿರುಧ್ದ್-ಭರತ್ ಛಾಯಾಗ್ರಹಣ ಚಿತ್ರಕ್ಕಿದೆ. ವಕೀಲರಾದ ಡಾ.ಎಂ.ವೆಂಕಟಸ್ವಾಮಿ 'ಎಂ.ವಿ.ಫಿಲ್ಮ್ಸ್' ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.