ಗೀತಾ ಚಿತ್ರದಲ್ಲಿ ಶಂಕರ್ ನಾಗ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕೆ ಎಸ್ ಅಶ್ವಥ್, ಲೋಹಿತಾಶ್ವ ಟಿ ಎಸ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಶಂಕರ್ ನಾಗ್ ಅವರ ನಿರ್ದೇಶನದೊಂದಿಗೆ ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ರಾಕ್ ಬ್ಯಾಂಡ್ ಗಾಯಕ ಸಂಜಯ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ತಾನು ಪ್ರೀತಿಸುವ ಗೀತಾಳನ್ನು ಮಾರಣಾಂತಿಕ ಕ್ಯಾನ್ಸರ್ ನಿಂದ ಪಾರುಮಾಡುಲು ಪ್ರಯತ್ನಿಸಿ ಕೊನೆಯ ಕ್ಷಣದಲ್ಲಿ ವಿಫಲವಾಗುವ ಸಂಜಯನ ಪರಿಸ್ಥಿತಿ ಪ್ರೇಕ್ಷಕರಲ್ಲಿ ಕಣ್ಣೀರು ತರಿಸುತ್ತದೆ.