X
ಘೋಸ್ಟ್
Action | 19 Oct 2023 | U/A | 133 Mins
Kannada

ಘೋಸ್ಟ್ ಕಥೆ

ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ `ಘೋಸ್ಟ್'ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ಜಯರಾಮ್‌, ದತ್ತಣ್ಣ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. 

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂದೇಶ್ ನಾಗರಾಜ್ ಸಿನಿಮಾಗೆ ಬಂಡವಾಳ ಹೂಡಿದ್ದು, ದೀಪು ಎಸ್ ಕುಮಾರ್ ಸಂಕಲನವಿದೆ.  ಸಿನಿಮಾದಲ್ಲಿ ಶಿವಣ್ಣನ ಲುಕ್, ಮ್ಯಾನರಿಸಂ ಹಾಗೂ ಡೈಲಾಗ್ ಡಿಲೇವರಿ ಫ್ಯಾನ್ಸ್‌ಗೆ ಕಿಕ್ ಕೊಡುತ್ತೆ. 

ಕಥೆ: 'ಘೋಸ್ಟ್‌' ಒಂದು ಜೈಲ್ ಹೈಜಾಕ್ ಮಾಡುವ ಕಥೆ. ಅದನ್ನು ಮಾಡೋದು ಶಿವಣ್ಣ. ಅಷ್ಟಕ್ಕೂ ಶಿವಣ್ಣ ಯಾಕೆ ಜೈಲ್ ಅನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್‌ ಹಿಂದಿರೋ ಐಡಿಯಾ ಏನು? ಹಣಕ್ಕಾಗಿ ಮಾಡಿದ್ರಾ ಅಥವಾ ವೈಯಕ್ತಿಕ ಕಾರಣಕ್ಕೆ ಹೈಜಾಕ್ ಮಾಡಿದ್ರಾ? ಎಂಬುದೇ ಈ ಸಿನಿಮಾದ ಪ್ರಮುಖ ಕಥೆ. ಶಿವರಾಜ್‌ಕುಮಾರ್ ಹಾಗೂ ಜಯರಾಮ್ ನಡುವಿನ ಜಿದ್ದಾಜಿದ್ದಿ ಈ ಚಿತ್ರದ ಹೈಲೈಟ್. 
  
ಒಟಿಟಿ ಹಕ್ಕು
ಘೋಸ್ಟ್ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದ್ದು, ಯಾವ ದಿನದಂದು ಬಿಡುಗಡೆಯಾಗಲಿದೆ ಎಂಬ ದಿನಾಂಕ ಇನ್ನೂ ನಿಗದಿಯಾಗಿಲ್ಲ. 


ಬಿಡುಗಡೆ: ಘೋಸ್ಟ್ ಸಿನಿಮಾ ಅಕ್ಟೋಬರ್ 19ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಒಟಿಟಿ ರಿಲೀಸ್: ಘೋಸ್ಟ್ ಸಿನಿಮಾ 2023ರ ನವೆಂಬರ್ 17ರಂದು ಜೀ5 ಒಟಿಟಿ ಫ್ಲಾಟ್‌ಫಾಮ್‌ನಲ್ಲಿ ಬಿಡುಗಡೆಯಾಯಿತು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+