twitter

    ಹೆಡ್ ಬುಷ್ ಕಥೆ

    `ಹೆಡ್ ಬುಷ್' ಸಿನಿಮಾವನ್ನುಶೂನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ಕೋ ಸೋಮಣ್ಣ ಜೊತೆಗೆ ಧನಂಜಯ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್  ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 
    70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗಲಿದೆ. 

    ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ದಶಕಗಳ ಹಿಂದೆ ಬೆಂಗಳೂರಿನಲ್ಲಿ ಜಯರಾಜ್ ಮತ್ತವನ ಗ್ಯಾಂಗ್ ಹಾವಳಿ ಹೇಗಿತ್ತು ಎನ್ನುವುದರ ಸಣ್ಣ ಝಲಕ್‌ ಅನ್ನು ಟ್ರೈಲರ್‌ನಲ್ಲಿ ಕೊಟ್ಟಿಕೊಟ್ಟಿದ್ದಾರೆ. ಕೆಂಪೇಗೌಡರು ಕಟ್ಟಿದ ನಗರದಲ್ಲಿ ರೌಡಿಸಂ ಹುಟ್ಟಿಕೊಂಡಿದ್ದು, ಜಯರಾಜ್ ನಂಬರ್ ವನ್ ಡಾನ್ ಆಗಿ ಬೆಳೆದಿದ್ದು ಹೀಗೆ ಸಾಗುತ್ತೆ. ಗಂಗಾ ಅಂಡ್ ಟೀಂ ಅವನಿಗೆ ಸಾಥ್ ಕೊಡುತ್ತಾ ಹೋಗಿದ್ದು, ಕೆಲ ರಾಜಕಾರಣಿಗಳು ಅವನನ್ನು ಬೆಳೆಸಿದ್ದು ಹೀಗೆ ಎಲ್ಲದರ ಇಣುಕು ನೋಟ ಎರಡೂವರೆ ನಿಮಿಷದ ಟ್ರೈಲರ್‌ನಲ್ಲಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ಮೊದಲ ನೋಟದಲ್ಲೇ ಗಮನ ಸೆಳೆದಿದ್ದಾರೆ. ಕೊತ್ವಾಲನಾಗಿ ವಶಿಷ್ಠ ಸಿಂಹ ಝಲಕ್ ಕೂಡ ಇದೆ.

    ಕಥೆ: ಜಯರಾಜ್, ಬಾಲ್ಯದಿಂದಲೂ ಒರಟು ಹುಡುಗ. ತನ್ನ ಏರಿಯಾದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿರುತ್ತಾನೆ. ಅವನನ್ನು ರಾಜಕಾರಣಿ ಎಂಡಿ ನಟರಾಜ್ (ತಿರುಚಿದ ಹೆಸರು) ಇಂದಿರಾ ಬ್ರಿಗೇಡ್ ಕಟ್ಟಲು ಬಳಸಿಕೊಳ್ಳುತ್ತಾನೆ. ಜಯರಾಜ್ ಸಹ ರಾಜಕಾರಣಿಯ ಬೆಂಬಲದೊಂದಿಗೆ ದೊಡ್ಡ ರೌಡಿಯಾಗುತ್ತಾನೆ. ಆದರೆ ಈ ನಡುವೆ ಕರಗದ ವಿಚಾರಕ್ಕೆ ಆಗುವ ಸಣ್ಣ ಮನಸ್ಥಾಪ ಆತನ ಆತ್ಮೀಯ ಗೆಳೆಯನೊಟ್ಟಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಆ ನಂತರ ಆ ಅವಕಾಶವನ್ನು ಜಯರಾಜ್ ವಿರುದ್ಧ ಹೊಂಚುಹಾಕುತ್ತಿದ್ದ ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕತೆ.


    **Note:Hey! Would you like to share the story of the movie ಹೆಡ್ ಬುಷ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X