twitter

    ಐ ಲವ್ ಯು ಕಥೆ

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯತಾರಾಗಣದಲ್ಲಿರುವ ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸಿದ್ದಾರೆ.ಚಂದ್ರು ನಿರ್ದೇಶನದ ಜೊತೆ ಚಿತ್ರ ನಿರ್ಮಾಣವನ್ನು ಕೂಡ ಮಾಡಿದ್ದಾರೆ.`ಪ್ರೇಮ ಕಾಮ ಭಗವಂತನ ಡ್ರಾಮಾ' ಎಂಬ ಟ್ಯಾಗಲೈನೊಂದಿಗೆ ಚಿತ್ರ ಬಿಡುಗಡೆಯಾಗಿದೆ.

    ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧಾರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧಾರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ.

    ಧಾರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಧಾರ್ಮಿಕಾ ಆತನಿಗೆ ಕೈ ಕೊಡುತ್ತಾಳೆ. ಪಾಠ ಮಾಡಲು ಬಂದವನೇ ಪಾಠ ಕಲಿಯುತ್ತಾನೆ. ಲವ್ ಗಿಂತ ಲೈಫ್ ಹೆಚ್ಚು ಎಂದು ದೊಡ್ಡ ಶ್ರೀಮಂತ ಆಗುತ್ತಾನೆ. ಬೇರೆ ಮದುವೆ ಆಗುತ್ತಾನೆ. ಆದರೆ, ಆತ ಸಂತೋಷವಾಗಿ ಇರಲ್ಲ. ಹೀಗಿರುವಾಗ ಆತನಿಗೆ ಮತ್ತೆ ತನ್ನ ಲವರ್ ಅನ್ನು ಭೇಟಿ ಮಾಡುವ ಸಂದರ್ಭ ಬರುತ್ತದೆ. ಆಗ ಏನಾಗುತ್ತದೆ?, ಯಾಕೆ ಆತನ ಲೈಫ್ ಗೆ ಆಕೆ ಮತ್ತೆ ಎಂಟ್ರಿ ಕೊಡುತ್ತಾಳೆ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿದೆ.

    ಚಿತ್ರಕ್ಕೆ U/A ಪ್ರಮಾಣ ಪತ್ರ ದೊರಕಿದೆ.ಬ್ರಹ್ಮ ಚಿತ್ರದ ನಂತರ ಮತ್ತೊಮ್ಮೆ ಉಪ್ಪಿ ಮತ್ತು ಚಂದ್ರು ಕಮಾಲ್ ಮಾಡಲಿದ್ದಾರೆ.ಈ ಚಿತ್ರದಲ್ಲಿ ರಚಿತಾಗೆ ಉಪ್ಪಿ ಪ್ರೇಮ ಪಾಠ ಹೇಳಲಿದ್ದಾರೆ.ಚಿತ್ರತಂಡ ಫೆಬ್ರವರಿ 14, 2019 ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿತ್ತು. ಆದರೆ ನಂತರ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಯಿತು.ನಂತರ ಜೂನ್ 14 ರಂದು ಬಿಡುಗಡೆ ಮಾಡಲಾಯಿತು.

    **Note:Hey! Would you like to share the story of the movie ಐ ಲವ್ ಯು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X