X
ಐ ಲವ್ ಯು

ಐ ಲವ್ ಯು

Drama | Romance | 14 Jun 2019 | U/A |
Kannada

2.5 /5 Users

2.5 /5 Filmibeat

ಐ ಲವ್ ಯು ಕಥೆ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯತಾರಾಗಣದಲ್ಲಿರುವ ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸಿದ್ದಾರೆ.ಚಂದ್ರು ನಿರ್ದೇಶನದ ಜೊತೆ ಚಿತ್ರ ನಿರ್ಮಾಣವನ್ನು ಕೂಡ ಮಾಡಿದ್ದಾರೆ.`ಪ್ರೇಮ ಕಾಮ ಭಗವಂತನ ಡ್ರಾಮಾ' ಎಂಬ ಟ್ಯಾಗಲೈನೊಂದಿಗೆ ಚಿತ್ರ ಬಿಡುಗಡೆಯಾಗಿದೆ. ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧಾರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧಾರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ. ಧಾರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಧಾರ್ಮಿಕಾ ಆತನಿಗೆ ಕೈ ಕೊಡುತ್ತಾಳೆ. ಪಾಠ ಮಾಡಲು ಬಂದವನೇ ಪಾಠ ಕಲಿಯುತ್ತಾನೆ. ಲವ್ ಗಿಂತ ಲೈಫ್ ಹೆಚ್ಚು ಎಂದು ದೊಡ್ಡ ಶ್ರೀಮಂತ ಆಗುತ್ತಾನೆ. ಬೇರೆ ಮದುವೆ ಆಗುತ್ತಾನೆ. ಆದರೆ, ಆತ ಸಂತೋಷವಾಗಿ ಇರಲ್ಲ. ಹೀಗಿರುವಾಗ ಆತನಿಗೆ ಮತ್ತೆ ತನ್ನ ಲವರ್ ಅನ್ನು ಭೇಟಿ ಮಾಡುವ ಸಂದರ್ಭ ಬರುತ್ತದೆ. ಆಗ ಏನಾಗುತ್ತದೆ?, ಯಾಕೆ ಆತನ ಲೈಫ್ ಗೆ ಆಕೆ ಮತ್ತೆ ಎಂಟ್ರಿ ಕೊಡುತ್ತಾಳೆ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿದೆ. ಚಿತ್ರಕ್ಕೆ U/A ಪ್ರಮಾಣ ಪತ್ರ ದೊರಕಿದೆ.ಬ್ರಹ್ಮ ಚಿತ್ರದ ನಂತರ ಮತ್ತೊಮ್ಮೆ ಉಪ್ಪಿ ಮತ್ತು ಚಂದ್ರು ಕಮಾಲ್ ಮಾಡಲಿದ್ದಾರೆ.ಈ ಚಿತ್ರದಲ್ಲಿ ರಚಿತಾಗೆ ಉಪ್ಪಿ ಪ್ರೇಮ ಪಾಠ ಹೇಳಲಿದ್ದಾರೆ.ಚಿತ್ರತಂಡ ಫೆಬ್ರವರಿ 14, 2019 ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿತ್ತು. ಆದರೆ ನಂತರ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಯಿತು.ನಂತರ ಜೂನ್ 14 ರಂದು ಬಿಡುಗಡೆ ಮಾಡಲಾಯಿತು.
Read More

ಐ ಲವ್ ಯು ಕಲಾವಿದರು ಮತ್ತು ಸಿಬ್ಬಂದಿ

ಐ ಲವ್ ಯು ಕ್ರೂ ಮಾಹಿತಿ

ನಿರ್ದೇಶಕ ಆರ್ ಚಂದ್ರು
ಸಿನಿಮಾಟೋಗ್ರಫಿ NA
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಡಾ.ಕಿರಣ್ ತೋಟಂಬೈಲ್
ನಿರ್ಮಾಪಕ ಆರ್ ಚಂದ್ರು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಐ ಲವ್ ಯು ವಿಮರ್ಶಕರ ವಿಮರ್ಶೆ

ಒಂದೇ ಒಂದು ಸಂದೇಶ, ಬಾಕಿ ಏನಿಲ್ಲ ವಿಶೇಷ.
''ಲವರ್ ಗಿಂತ ಹೆಂಡತಿ ಮುಖ್ಯ.. ನಾವು ಪ್ರೀತಿಸೋ ಲವರ್ ಗೆ ಐ ಲವ್ ಯೂ ಹೇಳುವ ಬದಲು, ನಮ್ಮನ್ನು ಪ್ರೀತಿಸೋ ಹೆಂಡತಿಗೆ ಐ ಲವ್ ಯೂ ಹೇಳಬೇಕು'' ಇದು ಐ ಲವ್ ಯೂ ಸಿನಿಮಾದಲ್ಲಿ ಸಿಗುವ ಸಂದೇಶ. ಈ ಸಂದೇಶವೆನೋ ಉತ್ತಮವಾಗಿದೆ. ಆದರೆ, ಈ ಒಂದು ಮೇಸೆಜ್ ಕೇಳಲು 2 ಗಂಟೆ 2 ನಿಮಿಷ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಕಷ್ಟಪಟ್ಟ ಕೂರಬೇಕು.ಎ + ಉಪೇಂದ್ರ = ಐ ಲವ್ ಯೂ ಎಂದು' ಪೋಸ್ಟರ್ ನಲ್ಲಿ ನಿರ್ದೇಶಕ ಚಂದ್ರು ಹಾಕಿದ್ದರು. ಅದೇ ರೀತಿಯೇ ಸಿನಿಮಾ 'ಎ' ಮತ್ತು 'ಉಪೇಂದ್ರ' ಸಿನಿಮಾಗಳ ಮಿಶ್ರಣ. ಸಿನಿಮಾ ನೋಡುತ್ತಿದ್ದರೆ, ಉಪೇಂದ್ರ ಅವರ ಹಿಂದಿನ ಸಿನಿಮಾಗಳು ಬಂದು ಹೋಗುತ್ತದೆ. ಉಪ್ಪಿಯ ಹಳೆಯ ಚಿತ್ರಗಳ ಕಥೆಯನ್ನು ಮಿಕ್ಸ್ ಮಾಡಿ, ಅವರಿಗೇ ಕಥೆ ಹೇಳಿ, ಸಿನಿಮಾ ಮಾಡುವುದರಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ. 'ಐ ಲವ್ ಯೂ' ಸಿನಿಮಾ ನೋಡಿ ಬಂದ ಮೇಲೆ ' ಇದು ಯಾವ ಕಾಲದ ಸಿನಿಮಾ..' ಎನ್ನುವ ಅನುಮಾನ ಬರುತ್ತದೆ. ಉಪೇಂದ್ರ ಅವರ ಹಿಂದಿನ ಸಿನಿಮಾಗಳ ಮಿಶ್ರಣ, ಹಳೆ ಶೈಲಿಯ ಫೈಟ್, ಮೋಸ ಮಾಡುವ ಹುಡುಗಿ, ಲವ್ ಗಿಂತ ಲೈಫ್ ಹೆಚ್ಚು ಎನ್ನುವ ಹುಡುಗ.. ಇದೆಲ್ಲ ಎಲ್ಲರೂ ಒಂದಲ್ಲ ಒಂದು ಸಿನಿಮಾದಲ್ಲಿ ನೋಡಿಕೊಂಡು ಬಂದಿದ್ದೇವೆ. ಸೋ, ಮತ್ತೆ ಇಲ್ಲಿ ಯಾಕೆ ನೋಡಬೇಕು ಹೇಳಿ. ಒಂದು ಸಾಲಿನಲ್ಲಿ ಹೇಳಬೇಕು ಅಂದರೆ ''ಸಿನಿಮಾದ ವಿಶೇಷ.. ಒಂದೇ ಒಂದು ಸಂದೇಶ''.

ಐ ಲವ್ ಯು ಪಾಟ್ಲುಗಳು

ಐ ಲವ್ ಯು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಐ ಲವ್ ಯು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+