ಕೆ.ವಿ.ರಾಜು ನಿರ್ದೇಶನದಲ್ಲಿ ಮೂಡಿಬಂದ ಇಂದ್ರಜಿತ್ ಚಿತ್ರದಲ್ಲಿ ಅಂಬರೀಶ್ ಮತ್ತು ದೀಪಿಕಾ ಚಿಕಾಲಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ದೇವರಾಜ ಮತ್ತು ಶಶಿಕುಮಾರ್ ಮುಖ್ಯ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಹಂಸಲೇಖ ಚಿತ್ರದ ಗೀತೆಗಳನ್ನು ಬರೆದು ಸಂಗೀತ ನೀಡಿದರು.
ಒಂದು ಉನ್ನತ ವ್ಯಕ್ತಿಗಳ ಕೈವಾಡ ಇರುವ ಕೇಸನ್ನು ತನಿಖೆ ಮಾಡಲು ಹೋಗಿ ತಾನು ಅವರ ಜಾಲಕ್ಕೆ ಬಲಿಯಾಗಿ ಜೈಲು ಸೇರುವ ಇಂದ್ರಜಿತ್ ಹೇಗೆ ಅವರನ್ನು ಸೆದೆ ಬಡಿಯುತ್ತಾನೆ ಎಂಬುದು ಚಿತ್ರದ ಕಥೆ. ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕು ಶತದಿನೋತ್ಸವ ಆಚರಿಸಿತು.ಚಿತ್ರದ ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಗೀತೆ ಇನ್ನೂ ಹಸಿರಾಗಿದೆ.