ಡಾ. ರಾಜಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿ ರಸಿಕರ ಅಚ್ಚು ಮೆಚ್ಚಿನ ಜೋಡಿಯಾಗಿದ್ದ ರಾಜ್-ಬಾರತಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಭಲೆ ಜೋಡಿ, ಶ್ರೀ ಕೃಷ್ಣ ದೇವರಾಯ, ಕುಲ ಗೌರವ, ಬಂಗಾರದ ಮನುಷ್ಯ ಮುಂತಾದ ಚಿತ್ರಗಳು ಇಂದಿಗೂ ಅಜರಾಮರವಾಗಿವೆ. ಹಾಗೇ ರಾಜ್ -ಲೀಲಾವತಿ ಮತ್ತು ರಾಜ್-ಜಯಂತಿ ಕೂಡ ಹೆಸರುವಾಸಿಯಾಗಿತ್ತು.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿತಾರಾ ಜೋಡಿಗಳು-Dr Rajkumar
/top-listing/best-onscreen-pairs-in-kannada-film-industry-dr-rajkumar-3-6855-635.html
ಡಾ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 1984 ರಲ್ಲಿ ತೆರೆಕಂಡ ಬಂಧನ ಚಿತ್ರದ ಮೂಲಕ ವಿಷ್ಣುವರ್ಧನ್ ಮತ್ತು ಸುಹಾಸಿನಿ ಜೋಡಿ ಒಂದಾಗಿತು. ಮೊದಲ ಚಿತ್ರದಲ್ಲಿ ಗಮನ ಸೆಳೆದ ಈ ಜೋಡಿ ನಂತರ ಸುಪ್ರಭಾತ, ಮುತ್ತಿನ ಹಾರ, ಹಿಮಪಾತ, ಹೆಂಡ್ತಿಗೇಳ್ತೀನಿ, ಮಾತಾಡ್ ಮಾತಾಡು ಮಲ್ಲಿಗೆ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಟಿಸಿತು.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿತಾರಾ ಜೋಡಿಗಳು-Vishnuvardhan
/top-listing/best-onscreen-pairs-in-kannada-film-industry-vishnuvardhan-3-6856-635.html
ಅನಂತ ನಾಗ್ ಮತ್ತು ಲಕ್ಷೀ ಕನ್ನಡದ ಮುದ್ದಾದ ಜೋಡಿಗಳಲ್ಲೊಂದು. ಮಧ್ಯಮ ವರ್ಗದ ಹಾಗೂ ಜನ ಸಮಾನ್ಯರ ಜೀವನಕ್ಕೆ ಹತ್ತಿರವಾದ ಪಾತ್ರಗಳು ಮತ್ತು ಕಾದಂಬರಿ ಆಧಾರಿತ ಚಿತ್ರಗಳ ಈ ಜೋಡಿ ಗಮನ ಸೆಳೆಯಿತು. ನಾ ನಿನ್ನ ಬಿಡಲಾರೆ ಚಿತ್ರದಿಂದ ಒಂದಾದ ಈ ಜೋಡಿ ಮುಂದೆ ಚಂದನದ ಗೊಂಬೆ, ಮುದುಡಿದ ತಾವರೆ ಅರಳಿತು, ಬೆಂಕಿಯ ಬಲೆ, ಇಬ್ಬನಿ ಕರಗಿತು ಮುಂತಾದ ಚಿತ್ರಗಳಲ್ಲಿ ನಟಿಸಿತು.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿತಾರಾ ಜೋಡಿಗಳು-Ananth Nag
/top-listing/best-onscreen-pairs-in-kannada-film-industry-ananth-nag-3-6857-635.html