ನಿರಂಜನ್ ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಇಂಜೆಕ್ಟ್ 0.7 ಚಿತ್ರಕ್ಕೆ ಪವಿತ್ರಾ ಎಂ.ಎಚ್ ಪ್ರ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ರೂಪಾ ಗೌಡ, ವಿನೇಶ್ ಎಂ, ಪ್ರಜ್ಞಾ ಮಲ್ಲೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮೋದ್ ಆಚಾರ್ಯ ಸಂಗೀತ ನೀಡಿರುವ ಈ ಚಿತ್ರದ ಒಂದು ಹಾಡನ್ನು ಸರಿಗಮಪ ಖ್ಯಾತಿ ಚನ್ನಪ್ಪ ಹುದ್ದರ್ ಹಾಡಿದ್ದಾರೆ.
ಇದೊಂದು ಐಟಿ ಉದ್ಯೋಗಿಗಳು ಸೇರಿ ಮಾಡಿರುವ ಚಿತ್ರವಾಗಿದ್ದು ಒಬ್ಬ ವೈದ್ಯೆಯ ಕೊಲೆಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ.