ಆರ್ಯನ್ ವೆಂಕಟೇಶ್ ಮತ್ತು ಪ್ರಗತಿ ಮುಖ್ಯ ಪಾತ್ರದಲ್ಲಿ ನಟಿಸಿರುವ `ಇಂತಿ ನಿಮ್ಮ ಬೈರಾ' ಚಿತ್ರವನ್ನು ಕೆ.ಜೆ.ಚಿಕ್ಕು ನಿರ್ದೇಶನ ಮಾಡಿದ್ದಾರೆ. ವೆಂಕಟೇಶ್ ಡಿ ನಿರ್ಮಾಣದ ಈ ಚಿತ್ರಕ್ಕೆ ಎಸ್.ನಾಗು ಸಂಗೀತ ನೀಡಿದ್ದಾರೆ. ಚಿತ್ರದ ಗೀತೆಗಳನ್ನು ವಿ.ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಬರೆದಿದ್ದಾರೆ.
ಕಥೆ- ಓದಿನಲ್ಲಿ ಅಷ್ಟು ಚುರುಕಿಲ್ಲದ ಬೈರ ತುಂಬಾ ವರ್ಷಗಳಿಂದ ಪ್ರಯತ್ನ ಪಡುತ್ತಲಿದ್ದರೂ ಹತ್ತನೇ ತರಗತಿ ಪಾಸಾಗಲು ವಿಫಲವಾಗುತ್ತಿರುತ್ತಾನೆ. ನಿರಾಶರಾದ ಅವನ ತಂದೆ ಓದಿಗೆ ವಿದಾಯ ಹೇಳಿ ತನ್ನ ಜೊತೆ ಹೊಲದ ಕೆಲಸದಲ್ಲಿ ಸೇರಲು ಹೇಳುತ್ತಾರೆ. ಬೈರನಿರ ಇನ್ನೊಂದು ಪ್ರಯತ್ನ ಮಾಡುವ ಆಸೆ.ಭೈರ ತುಂಬಾ ಮೃದು ಹೃದಯಿ ಮತ್ತು ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ. ಊರಿನಲ್ಲಿ ಮಕ್ಕಳಿಂದ ತಾತ್ಸಾರಕ್ಕೊಳಗಾಗಿರುವ ವೃದ್ಧರಿಗೆ ಆಗಾಗ ಎಲ್ಲ ತರಹದ ಸಹಾಯ ಮಾರಡುತ್ತಿರುತ್ತಾನೆ. ಹಾಗೆ ತನ್ನ ಉಡಾಫೆಗಳಿಂದ ತಂದೆಯಿಂದ ಧಾರಾಳವಾಗಿ ಬೈಗಳು ತಿನ್ನುತ್ತಿರುತ್ತಾನೆ. ಚಿತ್ರದಲ್ಲಿ ಬೈರನ ಮೂಲಕ ಒಂದು ಮುದ್ದಾದ ಟಿನೇಜ್ ಲವ್ ಸ್ಟೋರಿ ಅರಳಿದೆ.
ಹಾಗೇ ಒಂದು ಸಲ ಅವರಿಗೆ ಹಾಸಿಗೆ, ಹಣ್ಣು ಹೋಗಿ ಮುಂತಾದ ವಸ್ತುಗಳನ್ನು ತರಲು ತನ್ನ ತಂದೆಗೆ ತಿಳಿಯದಂತೆ ತಮ್ಮಲ್ಲಿರುವ ಎಲ್ಲಾ ಕುರಿಗಳನ್ನು ಮಾರುತ್ತಾನೆ. ಮಗನ ಈ ಕೃತ್ಯದಿಂದ ಕುಪಿತನಾದ ಮುಂದೆ ಏನು ಮಾಡುತ್ತಾನೆ? ಬೈರ ಹೇಗೆ ತನ್ನ ತಂದೆಯನ್ನು ಸಮಾಧಾನ ಮಾಡುತ್ತಾನೆ ಎಂಬುದು ಚಿತ್ರದ ಕಥೆ.