'ಐರಾವನ್' ರಾಮ್ಸ್ ರಂಗ ನಿರ್ದೇಶನದ ಚೊಚ್ಚಲ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಾರ್ತಿಕ್ ಜಯರಾಮ್ ನಾಯಕನಾಗಿ ನಟಿಸಿದ್ದಾರೆ. ಅದ್ವಿತಿ ಶೆಟ್ಟಿ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಅವಿನಾಶ್ ಕೃಷ್ಣ ಹೆಬ್ಬಾರ್ ಮುಂತಾದವರು ನಟಿಸಿದ್ದಾರೆ. ನಿರಂತರ ಗಣೇಶ್ ಈ ಸಿನಿಮಾವನ್ನು ನಿರ್ಮಸಿದ್ದು, ಪ್ರದೀಪ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನವಿದೆ.