ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು, ವಸಂತ್ ರವಿ, ಸುನೀಲ್, ವಿನಾಯಕನ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬಿಡುಗಡೆ: ಜೈಲರ್ ಸಿನಿಮಾ ಆಗಸ್ಟ್ 10ರಂದು ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಯಿತು.
ಕಥೆ: ಮಡದಿ, ಮಗ, ಸೊಸೆ ಹಾಗೂ ಮೊಮ್ಮಗನ ಜೊತೆ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್‌ದು ಸುಖೀ ಕುಟುಂಬ. ಮಗ ಅರ್ಜುನ್ ಪೊಲೀಸ್ ಆಫೀಸರ್. ಆತ ಪುರಾತನ ಕಾಲದ ಆಂಟಿಕ್ ವಿಗ್ರಹಗಳನ್ನು ಕದಿಯುವ ವರ್ಮನ್ ಮತ್ತವರ ಗ್ಯಾಂಗ್ ಹಿಂದೆ ಬೀಳ್ತಾನೆ. ಈ ಆದಿಯಲ್ಲಿ ಕಣ್ಮರೆಯಾಗುತ್ತಾನೆ. ಮಗ ಕಣ್ಮರೆಯಾಗಲು ಕಾರಣರಾದವರ ವಿರುದ್ಧ ಸಮರಕ್ಕೆ ನಿಲ್ತಾನೆ ಮುತ್ತುವೇಲ್ ಪಾಂಡಿಯನ್.ತಮ್ಮ ಕುಟುಂಬದವರನ್ನು ಉಳಿಸಿಕೊಳ್ಳುವುದರ ಜೊತೆಗೆ ವರ್ಮನ್ ಮತ್ತವನ ಗ್ಯಾಂಗ್‌ಗೆ ಮುತ್ತುವೇಲ್ ಸಿಂಹಸ್ವಪ್ನನಾಗುತ್ತಾನೆ. ಈ ಹಾದಿಯಲ್ಲಿ ಮಂಡ್ಯದ ಮಾಫಿಯಾ ಡಾನ್ ನರಸಿಂಹ(ಶಿವರಾಜ್‌ಕುಮಾರ್), ಮ್ಯಾಥ್ಯೂ(ಮೋಹನ್ ಲಾಲ್), ಬಿಹಾರದ ಮತ್ತೊಬ್ಬ ಡಾನ್(ಜಾಕೀ ಶ್ರಾಫ್) ಯಾಕೆ ಸಹಾಯ ಮಾಡುತ್ತಾರೆ? ಮುತ್ತುವೇಲ್ ಪಾಂಡಿಯನ್‌ಗೂ ಇವರಿಗೂ ಏನು ಸಂಬಂಧ? ತಿಹಾರ್ ಜೈಲಿನಲ್ಲಿ ಜೈಲರ್ ಆಗಿದ್ದ ಮುತ್ತುವೇಲ್ ಬಹಳ ಸೌಮ್ಯವಾಗಿ ಜೀವನ ಸಾಗಿಸುವುದು ಯಾಕೆ? ಕಣ್ಮರೆಯಾದ ಮಗ ಅರ್ಜುನ್ ಕಥೆ ಏನಾಯ್ತು? ಎಂಬುದೇ ಸಿನಿಮಾ ಕಥೆ.