ಜನುಮದ ಸ್ನೇಹಿತರು ರೋಹಿತ ಶೆಟ್ಟಿ,ಶೈಕ್ ಮುಕ್ತಿಯಾರ್, ಅಂಗಾರಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ `ಜನುಮದ ಸ್ನೇಹಿತರು' ಚಿತ್ರವನ್ನು ಪರಶುರಾಮ್ ನಾವಳ್ಳಿ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯನ್ನು ಶೈಕ್ ಮುಕ್ತಿಯಾರ್ ಬರೆದು ,ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ.
ಹೊಟ್ಟೆಪಾಡಿಗಾಗಿ ಒಂದು ಹಳ್ಳಿಯಿಂದ ಉದ್ಯೋಗವನರಸಿ ಬೆಂಗಳೂರಿಗೆ ಬರುವ ಇಬ್ಬರು ಸ್ನೇಹಿತರ ಕಥೆಯನ್ನು ಚಿತ್ರ ಹೊಂದಿದೆ. ಬೆಂಗಳೂರಿನಲ್ಲಿ ಮತ್ತೊಬ್ಬ ಸ್ನೇಹಿತೆ ಇವರಿಗೆ ಜೊತೆಯಾಗುತ್ತಾಳೆ. ಬೆಂಗಳೂರಿನ ದಟ್ಟ ಕಾಂಕ್ರೀಟ್ ಕಾಡಿನಲ್ಲಿ ಈ ಮೂವರು ಹೇಗೆ ಜೀವನ ಕಟ್ಟಿ ಕೊಳ್ಳುತ್ತಾರೆ ಎಂಬುದು ಚಿತ್ರದ ಕಥೆ.