ಜಸ್ಟ್ ಪಾಸ್ ಸಿನಿಮಾವನ್ನು ಕೆ.ಎಂ ರಘು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಮಹಾದೇವ್ ನಾಯಕನಾಗಿ ಮತ್ತು ಪ್ರಣತಿ ಬಿಜಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಯಶಿಕಾ ಗೌಡ, ಚಂದುಶ್ರೀ ಸಿದ್ದಯ್ಯ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮಿನಾಡ್, ಗೋವಿಂದೇಗೌಡ, ಡುಮ್ಮ ವಿಶ್ವಾಸ್ ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಸುಜಯ್ ಕುಮಾರ್ ಛಾಯಾಗ್ರಹಣ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಸಿನಿಮಾಗಿದೆ. ಈ ಚಿತ್ರವನ್ನು ಕೆ.ವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಜಸ್ಟ್ ಪಾಸ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಕಥೆ ಹೆಣೆಯಲಾಗಿದೆ. ಜಸ್ಚ್ ಪಾಸ್ ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಕಾಲೇಜು ಸ್ಥಾಪಿಸುವ ಉದ್ದೇಶದ ಕಥೆ ಇದಾಗಿದ್ದು, ಸೀರಿಯಸ್ ವಿಚಾರವನ್ನು ಮನರಂಜನಾತ್ಮಕವಾಗಿ ಹೇಳುವ ಉದ್ದೇಶವನ್ನು ಸಿನಿಮಾ ಹೊಂದಿದೆ.
ಬಿಡುಗಡೆ: ಜಸ್ಟ್ ಪಾಸ್ ಸಿನಿಮಾ 2024ರ ಫೆಬ್ರವರಿ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.