ಕಾಡುಮಳೆ ಸಿನಿಮಾವನ್ನು ಸಮರ್ಥ್ ಮಂಜುನಾಥ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅರ್ಥ ಹರ್ಷನ್ ನಾಯಕನಾಗಿ ಹಾಗೂ ಸಂಗೀತಾ ರಾಜರಾಮ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಕಾರ್ತಿಕ್ ಭಟ್, ಗಿಲ್ಲಿ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ರಾಜು ಎನ್.ಎಮ್ ಛಾಯಾಗ್ರಹಣ ಹಾಗೂ ಮಹಾರಾಜ ಸಂಗೀತ ಸಿನಿಮಾಗಿದೆ. ಕಾಡುಮಳೆ ಸಿನಿಮಾವನ್ನು ಕಾಸ್ಮೋಸ್ ಮೂವೀಸ್ ನಿರ್ಮಾಣ ಮಾಡಿದೆ.
ಈ ಭೂಮಿ ಮೇಲೆ ಖಂಡಗಳು, ಸಮುದ್ರಗಳು, ಸ್ವರಗಳು, ವಾರ ಎಲ್ಲವೂ ಏಳು. ಇದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಬ್ರೈನ್ ಸ್ಕ್ಯಾಮಿಂಗ್ ಅನ್ನೋದು ಈ ಸಿನಿಮಾದ ಉಪಶೀರ್ಷಿಕೆ.