X
ಕಬ್ಜ
Action | 17 Mar 2023 | U/A | 136 Mins
Kannada

ಕಬ್ಜ ಕಥೆ

ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾ 'ಕಬ್ಜ'ದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ನಟಿಸಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ವಿಶೇಷ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ಅಭಿನಯಿಸಿದ್ದು, ಕೋಟಾ ಶ್ರೀನಿವಾಸ ರಾವ್, ಕಬೀರ್ ದುಹಾನ್ ಸಿಂಗ್, ಸುಬ್ಬರಾಜು, ನವಾಬ್ ಶಾ, ದೇವ್ ಗಿಲ್, ನೀನಾಸಂ ಅಶ್ವಥ್ ಮುಂತಾದವರಿದ್ದಾರೆ. 'ಕಬ್ಜ' ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಎಜೆ ಶೆಟ್ಟಿ ಛಾಯಾಗ್ರಹಣವಿದೆ. ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಚಂದ್ರು ನಿರ್ಮಿಸಿದ್ದಾರೆ.

ಕಥೆ: 1945 ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಚರಿತ್ರೆಗೆ ನಾಂದಿ ಹಾಡಲಾಗಿದೆ. ಅರ್ಕೇಶ್ವರನ ತಂದೆ ಸ್ವಾತಂತ್ರ್ಯ ಹೋರಾಟಗಾರ. ಉತ್ತರ ಭಾರತದಲ್ಲಿ ನೆಲೆಸಿದ್ದ ಅರ್ಕೇಶ್ವರನ ತಂದೆ ಬ್ರಿಟಿಷರ ಕತಂತ್ರಕ್ಕೆ ಬಲಿಯಾಗಬೇಕಾಗುತ್ತೆ. ಇಡೀ ಊರೇ ನಾಶವಾಗುತ್ತೆ. ಅಲ್ಲಿಂದ ಅರ್ಕೇಶ್ವರ ಹಾಗೂ ಸಂಕೇಶ್ವರ ಇಬ್ಬರು ಮಕ್ಕಳನ್ನು ಕರೆದುಕೊಂಡು ತಾಯಿ ದಕ್ಷಿಣ ಭಾರತದ ಅಮರಾಪುರದಲ್ಲಿ ಬಂದು ನೆಲೆಸುತ್ತಾರೆ. ಚರಕದಿಂದ ಬಟ್ಟೆ ನೇಯುತ್ತಾ? ಜೀವನ ಸಾಗಿಸುತ್ತಾ ಮಕ್ಕಳನ್ನು ಬೆಳೆಸುತ್ತಾರೆ. ಇಬ್ಬರು ಗಂಡು ಮಕ್ಕಳಲ್ಲಿ ಅರ್ಕೇಶ್ವರ ಚಿಕ್ಕವನು. ಹೀಗಾಗಿ ಅಣ್ಣನೇ ಮನೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇವರಿಬ್ಬರು ಬೆಳೆದು ನಿಲ್ಲುವಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿರುತ್ತೆ. ಅಮರಾಪುರದಲ್ಲಿ ಡಾನ್ ಖಲೀಲ್ ಆರ್ಭಟ ಜೋರಾಗಿರುತ್ತೆ.

ಅರ್ಕೇಶ್ವರ ವಾಯುಸೇನೆಯಲ್ಲಿ ತರಬೇತಿ ಪಡೆದು ಪೋಸ್ಟಿಂಗ್ ಹೋಗುವ ಮುನ್ನ ಅಮರಾಪುರಕ್ಕೆ ಮರಳುತ್ತಾನೆ. ಆ ವೇಳೆ ಅಮರಾಪುರದಲ್ಲಿ ರಾಜಮನೆತನ, ರಾಜಕೀಯ ಮುಖಂಡರು ಹಾಗೂ ಭೂಗತಲೋಕದ ಮಧ್ಯೆ ಸಮರ ಶುರುವಾಗಿತ್ತೆ. ಅಂಡರ್‌ವರ್ಲ್ಡ್‌ ಡಾನ್‌ಗಳು ಒಳಗೊಳಗೆ ಕತ್ತಿ ಮಸೆಯುತ್ತಿರುತ್ತಾರೆ. ಈ ವೇಳೆ ಅಮರಾಪುರದಲ್ಲಿ ನಡೆದ ಒಂದು ಘಟನೆಯಿಂದ ಅಣ್ಣ ಸಂಕೇಶ್ವರನ ಕೊಲೆಯಾಗತ್ತೆ. ನಂತರ ಅಣ್ಣ ಕೊಲೆ ಮಾಡಿದವರ ನಾಶ ಮಾಡಲು ಹೊರಟ ಅರ್ಕೇಶ್ವರ ಸೆಕೆಂಡ್ ಹಾಫ್‌ನಲ್ಲಿ ಭೂಗತಲೋಕವನ್ನೇ 'ಕಬ್ಜ' ಮಾಡಿತ್ತಾನೆ.

ಖಡಕ್ ಡೈಲಾಗ್ಸ್ 
'ಇತಿಹಾಸ ಯಾವಾಗಲೂ ಉರುಳಿರುವ ತಲೆಗಳಿಗಿಂತ, ಕತ್ತರಿಸುವ ಕೈಗಳನ್ನೇ ಕೊಂಡಾಡುವುದು.  ಅಂತ ಕೈಯಿಂದ ಸೃಷ್ಟಿಯಾಗಿರುವ ಚರಿತ್ರೆನೇ ಕಬ್ಜ'.  'ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದ ಅಲ್ಲ, ಅದನ್ನು ಹಿಡಿಯುವ ಬಲವಾದ ಕೈಯಿಂದ' ಎನ್ನುವ ಕಿಚ್ಚನ ಖಡಕ್ ಡೈಲಾಗ್ ಸಿನಿಮಾದಲ್ಲಿದ್ದು, ಸಖತ್ ಕಿಕ್ ಕೊಡುತ್ತಿತ್ತು. 

ಐಎಂಡಿಬಿ ಪಟ್ಟಿಯಲ್ಲಿ ಕಬ್ಜ : ಸಿನಿಮಾ ಸುದ್ದಿ, ರೆಂಟಿಂಗ್ ಹಾಗೂ ಬಾಕ್ಸಾಫೀಸ್ ಗಳಿಕೆಯಂತಹ ಅಂಶಗಳ ವಿಚಾರವಾಗಿ ಜನಪ್ರಿಯತೆ ಸಂಪಾದಿಸಿರುವ ಐಎಂಡಿಬಿ 2023ರ ಭಾರತದ  ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಕನ್ನಡದ ಕಬ್ಜ ಮೊದಲನೇ ಸ್ಥಾನ ಪಡೆದಿತ್ತು. 

ಬಿಡುಗಡೆ: 'ಕಬ್ಜ' ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲಗು, ತಮಿಳು, ಮಲಯಾಳಂ, ಮರಾಠಿ, ಬಂಗಾಲಿ ಮತ್ತು ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಮಾರ್ಚ್ 17ರಂದು ಬಿಡುಗಡೆಯಾಗಿತ್ತು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+