X
ಕನ್ನೇರಿ
Drama | Thriller | 04 Mar 2022 | U/A |
Kannada

ಕನ್ನೇರಿ ಕಥೆ

ನೀನಾಸಂ ಮಂಜು ನಿರ್ದೇಶದಲ್ಲಿ ಮೂಡಿ ಬಂದಿರುವ ಕಾಡಿನ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಕನ್ನೇರಿ ಚಿತ್ರದಲ್ಲಿ ಅರ್ಚನಾ ಮಧುಸೂದನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅನೀತಾ ಭಟ್, ಅರುಣ್ ಸಾಗರ್, ಸರ್ದಾರ ಸತ್ಯ ಪ್ರಮುಖ ಪಾತ್ರಗಳಲ್ಲೆ ನಟಿಸಿದ್ದಾರೆ. ಚಿತ್ರಕ್ಕೆ ಪಿ.ಪಿ ಹೆಬ್ಬಾರ್ ಬಂಡವಾಳ ಹೂಡಿದ್ದಾರೆ.

ಕಥೆ: 'ಕನ್ನೇರಿ' ಒಬ್ಬ ಹೆಣ್ಣು ಮಗಳ ಕಥೆ. ಕಾಡಿನ ಗರ್ಭದಲ್ಲಿ ಹುಟ್ಟಿ ಬೆಳೆದ ಕಾಡುಮಕ್ಕಳನ್ನು ಮೂಲ ಸ್ಥಾನದಿಂದ ಒಕ್ಕಲೆಬ್ಬಿಸಿದಾಗ ಅವರ ಬದುಕು, ಬವಣೆ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.ಕಾಡಿನಲ್ಲೇ ಹುಟ್ಟಿ ಬೆಳೆದು, ಅಲ್ಲೇ ಜೀವನ ಕಟ್ಟಿಕೊಂಡ ಆದಿವಾಸಿಗಳ ಬದುಕನ್ನು ಆಧುನೀಕರಣದ ಹೆಸರಲ್ಲಿ, ಅವರಿಗೆ ಮೋಸ ಮಾಡಿ ದೌರ್ಜನ್ಯ ಎಸಗಿ, ಅವರ ಮೂಲಸ್ಥಾನದಿಂದ ಒಕ್ಕಲೆಬ್ಬಿಸಿ ಹೇಗೆ ದರ್ಪ ಮೆರೆಯಲಾಗುತ್ತೆ, ಎಂದು ಚಿತ್ರದಲ್ಲಿ ಹೇಳಲಾಗಿದೆ.

ಸಾಕ್ಷ್ಯ ಚಿತ್ರ ಮಾಡುವ ವ್ಯಕ್ತಿಯೊಬ್ಬ ದುಡಿಮೆಗಾಗಿ ಪಟ್ಟಣಕ್ಕೆ ಹೋದ ಆದಿವಾಸಿ ಹೆಣ್ಣು ಮಕ್ಕಳ ಬಗ್ಗೆ ಶೋಧನೆ ಆರಂಭಿಸಿದಾಗ ಅವನಿಗೆ ಮುತ್ತಮ್ಮ ಸಿಗುತ್ತಾಳೆ. ಮುಂದೆ ಮುತ್ತಮ್ಮಳ ಕಥೆ ತೆರೆದುಕೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+