ಕ್ರಿಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್ ರೋಮ್ಯಾಂಟಿಕ್ ಕಾಮಿಡಿ ಕಪಟ ನಾಟಕ ಪಾತ್ರಧಾರಿ ಚಿತ್ರದಲ್ಲಿ ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಗರುಡ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆದಿಲ್ ನದಾಫ್ ಸಂಗೀತ ನೀಡಿದ್ದಾರೆ.
ಅಟೋ ಚಾಲಕ ಕೃಷ್ಣ ತಾನು ಪ್ರೀತಿಸುವ ಹುಡುಗಿ ರುಕ್ಮಿಣಿಗೆ ಸಹಾಯ ಮಾಡಲು ಹೋಗುತ್ತಾನೆ. ಇದರಿಂದ ಅವನೊಂದು ಕಪಟ ನಾಟಕದ ಪಾತ್ರಧಾರಿ ಆಗಬೇಕಾಗುತ್ತದೆ. ಅನೀರಿಕ್ಷೀತವಾಗಿ ಇದೇ ನಾಟಕದ ಒಂದು ಭಾಗವಾಗಿ ರುಕ್ಮಿಣಿ ಕೂಡ ಸೇರುತ್ತಾಳೆ.