ಕರಾವಳಿ ಸಿನಿಮಾವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅವರು ನಾಯಕನಾಗಿ ನಟಿಸುತ್ತಿರುವ 40ನೇ ಸಿನಿಮಾ. ಸಚಿನ್ ಬಸ್ರೂರು ಸಂಗೀತ ಹಾಗೂ ಪ್ರವೀಣ್ ಕಲ್ ಸಂಕಲನ ಚಿತ್ರಕ್ಕಿದೆ.
ಟೀಸರ್: 'ದಕ್ಷಿಣ ಕನ್ನಡ ಭಾಗದ ಕಥೆಯೇ ಆಗಿರುವುದರಿಂದ 'ಕರಾವಳಿ' ಸಿನಿಮಾದ ಟೀಸರ್ ಅನ್ನು ಡಿಸೆಂಬರ್ 10ರಂದು ಮಂಗಳೂರಿನಲ್ಲಿಯೇ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಟೀಸರ್‌ನಲ್ಲಿ ಕೋಣ ಏರಿ ಬರುವ ದೃಶ್ಯ ಸಾಕಷ್ಟು ಗಮನ ಸೆಳೆಯುತ್ತಿದೆ.