X
ಕವಲುದಾರಿ
Thriller | 12 Apr 2019 | U/A |
Kannada

ಕವಲುದಾರಿ ಕಥೆ

1977 ರಲ್ಲಿ ಪುರಾತತ್ವಶಾಸ್ತ್ರ ಇಲಾಖೆಯಲ್ಲಿ ಒಂದು ಕೊಲೆ ಮತ್ತು ದರೋಡೆ ನೆಡೆಯುತ್ತದೆ. ಕೊಲೆಯಾದ ವ್ಯಕ್ತಿ ಸುರೇಶ್ ಯಾರು? ಅದೇ ಸಮಯದಲ್ಲಿ ನಾಯ್ಡು ಎಂಬ ವ್ಯಕ್ತಿ ನಾಪತ್ತೆಯಾಗುತ್ತಾನೆ. ಇವರೆಡು ಘಟನೆಗಳಿಗೇನು ಸಂಬಂಧ?

ಈ ಹಳೆಯ ಕೇಸಿನ ಹಿಂದೆ ಬೀಳುವ ಒಬ್ಬ ಟ್ರಾಫಿಕ್ ಪೋಲಿಸ್ ತನ್ನೆಲ್ಲಾ ಯುಕ್ತಿ ಉಪಯೋಗಿಸಿ ಈ ಕೇಸಿನ ಮೂಲ ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ತನ್ನ ಮೇಲಾಧಿಕಾರಿಗಳಿಂದ ಇದಕ್ಕೆ ಪ್ರೋತ್ಸಾಹ ದೊರಕದಿದ್ದರೂ ಒಬ್ಬ ಪತ್ರಕರ್ತನ ಜೊತೆ ಸೇರಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸುತ್ತಾನೆ.

ಈ ಕೇಸಿನಲ್ಲಿ ಮುತ್ತಣ್ಣ ಎಂಬ ನಿವೃತ್ತ ಪೋಲಿಸ್ ಅಧಿಕಾರಿ ಮತ್ತು ಮಾಧುರಿ ಎಂಬ ಪ್ರಸಿದ್ಧ ಚಿತ್ರನಟಿ ಕೂಡ ಪ್ರಮುಖ ಪಾತ್ರವಹಿಸುತ್ತಾರೆ. ಹಲವು ಸುಳ್ಳುಗಳ ಜಾಲದಿಂದ ಸುತ್ತವರೆದ ಒಬ್ಬ ಇನಸ್ಪೆಕ್ಟರ್ ಹೇಗೆ ಈ ಕೇಸನ್ನು ಪರಿಹರಿಸುತ್ತಾನೆ ಎಂಬುದನ್ನು ಚಿತ್ರ ವಿವರಿಸುತ್ತದೆ.

ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಈ ಚಿತ್ರವನ್ನು `ಗೋದಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿ' ಹೇಮಂತ ರಾವ್ ನಿರ್ದೇಶಿಸಿದ್ದಾರೆ. ಚಿತ್ರದ ಟೈಟಲ್ ಸಾಂಗ್ ಪುನೀತ್ ಧ್ವನಿಯಲ್ಲಿ ಮೂಡಿಬಂದಿದೆ.
2020 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+