ಕೇದರ್‌ನಾಥ್ ಕುರಿ ಫಾರಂ ಸಿನಿಮಾವನ್ನು ಸೀನು ಸಾಗರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಡೆನೂರು ಮನು ನಾಯಕನಾಗಿ ಹಾಗೂ ಶಿವಾನಿ ಅಮರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ಕರಿ ಸುಬ್ಬು, ಸಿದ್ದು ಮಂಡ್ಯ, ಸುನಂದ ಹೊಸಪೇಟ್, ನಿಂಗರಾಜು ಮಜಾಭಾರತ, ಮುತ್ತುರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸನ್ನಿ ಡಾನ್ ಅಬ್ರಹಾಂ ಸಂಗೀತ ನಿರ್ದೇಶನ, ರಾಕೇಶ್ ತಿಲಕ್ ಛಾಯಾಗ್ರಹಣ ಹಾಗೂ ಕೆಎಂ ಪ್ರಕಾಶ್ ಸಂಕಲನವಿದೆ. ಕೆ ಎಂ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.