ತಮಿಳಿನ `ಸಿಂಗಂ' ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ನಿರ್ದೇಶನ ಮಾಡಿದ ಸುದೀಪ್ `ವೀರ ಮದಕರಿ' ಚಿತ್ರದ ನಂತರ ಮತ್ತೊಮ್ಮೆ ಈ ಚಿತ್ರದಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದರು.8 ಕೋಟಿ ಬಜಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸುಮಾರು 38 ಕೋಟಿ ಗಳಿಸಿ ಅದ್ಭುತ ಯಶಸ್ಸು ಕಂಡಿತು.
ಈ ಚಿತ್ರದ ಮೂಲಕ ರವಿಶಂಕರ್ ಎಂಬ ನಟಭಯಂಕರ ಖಳನಾಯಕ ಕನ್ನಡಕ್ಕೆ ದೊರೆತರು. ಈ ಚಿತ್ರದಲ್ಲಿ ಇವರು ನಟಿಸಿದ `ಆರ್ಮುಗಂ' ಪಾತ್ರದಿಂದ ಅಪಾರ ಪ್ರಶಂಸೆ ಪಡೆದರು. ಚಿತ್ರಕಥೆ
ಅರ್ಜುನ ಜನ್ಯ ಈ ಮೊದಲು ಕೆಲ ಚಿತ್ರಗಳಿಗೆ ಸಂಗೀತ ನೀಡಿದ್ದರೂ ಇವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ಮಾತ್ರ ಕೇಂಪೆಗೌಡ ಚಿತ್ರ. ಈ ಚಿತ್ರದಲ್ಲಿ ಖ್ಯಾತ ಉದ್ಯಮಿ ಅಶೋಕ್ ಖೇಣಿ ಗೃಹಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕಥೆ
ಹುಬ್ಬಳ್ಳಿ ಹತ್ತಿರದ ತನ್ನ ಸ್ವಗ್ರಾಮದಲ್ಲಿ ಪೋಲಿಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಂಪೇಗೌಡ(ಸುದೀಪ್) ಊರಿಗೆ ಪ್ರಿಯ.ಊರಿಗೆ ಬರುವ ತನ್ನ ತಂದೆಯ ಸ್ನೇಹಿತನ ಮಗಳಾದ ಕಾವ್ಯ (ರಾಗಿಣಿ) ಜೊತೆ ಪ್ರೀತಿ ಬೆಳೆಯುತ್ತದೆ.
ಈ ಸಮಯದಲ್ಲಿ ಬೆಂಗಳೂರಿನಲ್ಲಿರುವ ರೌಡಿ ಆರ್ಮುಗಂ (ರವಿಶಂಕರ್) ಯಾವುದೋ ಒಂದು ಬೇಲ್‌ಗಾಗಿ ಹುಬ್ಬಳ್ಳಿಗೆ ಬಂದು ಸಹಿ ಮಾಡಬೇಕಾಗಿರುತ್ತದೆ. ಇದೆ ವಿಷಯದ ಮೇಲೆ ಆರ್ಮುಗಂ ಕೆಂಪೇಗೌಡನ ಮೇಲೆ ತೀಕ್ಣವಾಗಿ ಕೋಫಗೊಳ್ಳುವ ಘಟನೆ ನೆಡೆಯುತ್ತದೆ.
ಕೆಂಪೇಗೌಡನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅರ್ಮುಗಂ ಕೆಂಪೇಗೌಡನನ್ನು ಬೆಂಗಳೂರಿಗೆ ವರ್ಗಾಯಿಸಿಕೊಳ್ಳುತ್ತಾನೆ. ಇಲ್ಲಿಂದ ಅರ್ಮುಗಂ ಹೇಗೆ ಕೆಂಪೇಗೌಡನಿಗೆ ತೊಂದೆರೆ ಕೊಡಲಾರಂಭಿಸುತ್ತಾನೆ ಮತ್ತು ಕೆಂಪೇಗೌಡ ಅದನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಮೂಲ ಕಥೆಯಾಗಿದೆ.