ಕೆಂಪೇಗೌಡ 2 (2019)
ಕೆಂಪೇಗೌಡ 2 ಕಥೆ
ಕೆಂಪೇಗೌಡ 2 ಚಿತ್ರವು 2011 ರ ಬ್ಲಾಕಬ್ಲಸ್ಟರ್ ಚಿತ್ರ `ಕೆಂಪೇಗೌಡ' ಚಿತ್ರದ ಸಿಕ್ವೆಲ್ ಆಗಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಕೆಂಪೇಗೌಡನಾಗಿ ಮಿಂಚಿದರೆ, ಕ್ರಿಕೆಟಿಗ ಶ್ರೀಶಾಂತ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಲೂಸ ಮಾದ ಯೋಗೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಶಂಕರೇಗೌಡ ನಿರ್ಮಿಸಿ ನಿರ್ದೇಶಿಸಿದ್ದಾರೆ.
ಕಥೆ- ಪೊಲೀಸ್ ಇಲಾಖೆಯಲ್ಲಿ ಸಿಂಹ ಅಂತಾನೇ ಕರೆಸಿಕೊಳ್ಳುವ ಕೆಂಪೇಗೌಡ, ಯಾವುದೇ ಪ್ರಕರಣಕ್ಕೆ ಕೈ ಹಾಕಿದ್ರೆ ಆರೋಪಿಗಳ ಕಥೆ ಮುಗಿತು ಅಂತ ಅರ್ಥ. ಜನರ ಕಷ್ಟಗಳಿಗೆ ಕಿವಿ ಕೊಡುವ ಪ್ರಮಾಣಿಕತೆ ಮತ್ತು ದಕ್ಷ ಅಧಿಕಾರಿ. ನ್ಯಾಯಕ್ಕಾಗಿ ಹೋರಾಡುವ ಸೂಪರ್ ಕಾಪ್.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸುವ ಕೆಂಪೇಗೌಡ, ಆ ಕೊಲೆ ಹಿಂದೆ ಯಾರಿದ್ದಾರೆ, ಯಾಕೆ ಕೊಲೆ ಮಾಡಿದ್ರು, ಆತನ ಉದ್ದೇಶವೇನು, ರಾಜಕೀಯಕ್ಕೂ ಆತನಿಗೂ ಏನು ಸಂಬಂಧ, ಹೀಗೆ ಇಡೀ ಕಥೆ ಇಲ್ಲಿಯೇ ಸುತ್ತುತ್ತೆ. ಇದರ ಜೊತೆ ಕರ್ನಾಟಕ ರಾಜಕೀಯ, ಮುಖ್ಯಮಂತ್ರಿ ಪಟ್ಟ, ಸಮ್ಮಿಶ್ರ ಸರ್ಕಾರ, ಕುದುರೆ ವ್ಯಾಪರ, ರಾಜಕಾರಣಿಗಳ ವೀಕ್ನೆಸ್, ರಾಜಕೀಯ ಪಕ್ಷಗಳ ಕೆಲಸ, ಬ್ಲ್ಯಾಕ್ ಮೇಲ್ ತಂತ್ರ, ಚುನಾವಣೆ, ಅಕ್ರಮ ಮತದಾನ, ಇವಿಎಂ ಹ್ಯಾಕ್ ಹೀಗೆ ಹಲವು ವಿಷ್ಯಗಳನ್ನ ಕಥೆಯಲ್ಲಿ ಪ್ರಸ್ತಾಪಿಸಲಾಗಿದೆ.