X
ಕನ್ನಡ » ಚಲಚಿತ್ರಗಳು » ಕೆಂಪೇಗೌಡ 2
ಕೆಂಪೇಗೌಡ 2

ಕೆಂಪೇಗೌಡ 2

Action | 09 Aug 2019 |
Kannada

2.5 /5 Users

3 /5 Filmibeat

ಕೆಂಪೇಗೌಡ 2 ಕಥೆ

ಕೆಂಪೇಗೌಡ 2 ಚಿತ್ರವು 2011 ರ ಬ್ಲಾಕಬ್ಲಸ್ಟರ್ ಚಿತ್ರ `ಕೆಂಪೇಗೌಡ' ಚಿತ್ರದ ಸಿಕ್ವೆಲ್ ಆಗಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಕೆಂಪೇಗೌಡನಾಗಿ ಮಿಂಚಿದರೆ, ಕ್ರಿಕೆಟಿಗ ಶ್ರೀಶಾಂತ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಲೂಸ ಮಾದ ಯೋಗೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಶಂಕರೇಗೌಡ ನಿರ್ಮಿಸಿ ನಿರ್ದೇಶಿಸಿದ್ದಾರೆ. ಕಥೆ - ಪೊಲೀಸ್ ಇಲಾಖೆಯಲ್ಲಿ ಸಿಂಹ ಅಂತಾನೇ ಕರೆಸಿಕೊಳ್ಳುವ ಕೆಂಪೇಗೌಡ, ಯಾವುದೇ ಪ್ರಕರಣಕ್ಕೆ ಕೈ ಹಾಕಿದ್ರೆ ಆರೋಪಿಗಳ ಕಥೆ ಮುಗಿತು ಅಂತ ಅರ್ಥ. ಜನರ ಕಷ್ಟಗಳಿಗೆ ಕಿವಿ ಕೊಡುವ ಪ್ರಮಾಣಿಕತೆ ಮತ್ತು ದಕ್ಷ ಅಧಿಕಾರಿ. ನ್ಯಾಯಕ್ಕಾಗಿ ಹೋರಾಡುವ ಸೂಪರ್ ಕಾಪ್. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸುವ ಕೆಂಪೇಗೌಡ, ಆ ಕೊಲೆ ಹಿಂದೆ ಯಾರಿದ್ದಾರೆ, ಯಾಕೆ ಕೊಲೆ ಮಾಡಿದ್ರು, ಆತನ ಉದ್ದೇಶವೇನು, ರಾಜಕೀಯಕ್ಕೂ ಆತನಿಗೂ ಏನು ಸಂಬಂಧ, ಹೀಗೆ ಇಡೀ ಕಥೆ ಇಲ್ಲಿಯೇ ಸುತ್ತುತ್ತೆ. ಇದರ ಜೊತೆ ಕರ್ನಾಟಕ ರಾಜಕೀಯ, ಮುಖ್ಯಮಂತ್ರಿ ಪಟ್ಟ, ಸಮ್ಮಿಶ್ರ ಸರ್ಕಾರ, ಕುದುರೆ ವ್ಯಾಪರ, ರಾಜಕಾರಣಿಗಳ ವೀಕ್ನೆಸ್, ರಾಜಕೀಯ ಪಕ್ಷಗಳ ಕೆಲಸ, ಬ್ಲ್ಯಾಕ್ ಮೇಲ್ ತಂತ್ರ, ಚುನಾವಣೆ, ಅಕ್ರಮ ಮತದಾನ, ಇವಿಎಂ ಹ್ಯಾಕ್ ಹೀಗೆ ಹಲವು ವಿಷ್ಯಗಳನ್ನ ಕಥೆಯಲ್ಲಿ ಪ್ರಸ್ತಾಪಿಸಲಾಗಿದೆ.
Read More

ಕೆಂಪೇಗೌಡ 2 ಕಲಾವಿದರು ಮತ್ತು ಸಿಬ್ಬಂದಿ

ಕೆಂಪೇಗೌಡ 2 ಕ್ರೂ ಮಾಹಿತಿ

ನಿರ್ದೇಶಕ ಶಂಕರೇ ಗೌಡ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಶಂಕರೇ ಗೌಡ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೆಂಪೇಗೌಡ 2 ವಿಮರ್ಶಕರ ವಿಮರ್ಶೆ

kannada.filmibeat.com
ಪ್ರಜೆಗಳ ಸೇವಕ,ಪ್ರಜಾಪ್ರಭುತ್ವದ ರಕ್ಷಕ ಅಭಿನಯದಲ್ಲಿ ಎಲ್ಲವೂ ಚೆನ್ನಾಗಿದೆ. ನಿರ್ಮಾಪಕರು ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ. ಕೆಂಪೇಗೌಡ ಎಂಬ ಹೆಸರು ಬಿಟ್ಟರೇ ಮ್ಯೂಸಿಕ್, ಹಾಡು ಯಾವುದು ನೆನಪಿನಲ್ಲಿ ಉಳಿಯುವುದಿಲ್ಲ. ಸಿನಿಮಾಟೋಗ್ರಫಿಗೆ ಅಂಕಗಳಿದೆ. ಫೈಟ್ ಗಳು ಕೋಮಲ್ ಅವರಿಗೆ ತಕ್ಕಂತೆ ಮಾಸ್ ಆಗಿದೆ. ಕಥೆಯಲ್ಲಿ ಹೊಸತೇನು ಇಲ್ಲ. ರೆಗ್ಯುಲರ್ ಕಮರ್ಷಿಯಲ್ ಸ್ಟೋರಿ. ಕೋಮಲ್ ಅವರಿಗೆ ಸೂಕ್ತವಾಗುವಂತೆ ಸ್ಕ್ರಿಪ್ಟ್ ಮಾಡಿ ಪ್ರೆಸೆಂಟ್ ಮಾಡುವಲ್ಲಿ ನಿರ್ದೇಶಕರು ಸಕ್ಸಸ್ ಆಗಿದ್ದಾರೆ. ಸುದೀಪ್ ಅವರ ಕೆಂಪೇಗೌಡ ನೆನಪಿನಲ್ಲಿಟ್ಟುಕೊಂಡು ಸಿನಿಮಾಗೆ ಹೋದರೆ ನಿರಾಸೆ ಖಂಡಿತ. ಅದನ್ನ ಬಿಟ್ಟು ಕೋಮಲ್ ಸಿನಿಮಾ ಎಂದು ಹೋದರೆ ಸರ್ಪ್ರೈಸ್ ಆಗುವುದು ಖಚಿತ.

ಕೆಂಪೇಗೌಡ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೆಂಪೇಗೌಡ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+