ಅಭಿಲಾಷ್ ಜೋಶಿ ನಿರ್ದೇಶನದ ಕಿಂಗ್ ಆಫ್ ಕೋಥಾ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಲಕ್ಷ್ಮೀ ಈ ಚಿತ್ರದ ನಾಯಕಿ. ಉಳಿದಂತೆ ಗೋಕುಲ್ ಸುರೇಶ್ ಗೋಪಿ, ಚಾಂಬನ್ ವಿನೋದ್, ಪ್ರಸನ್ನ ವೆಂಕಟೇಶನ್, ಅನಿಕಾ ಸುರೇಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. 90 ದಶಕದಲ್ಲಿ ಗುಲಾಬ್‌ಗಂಜ್ ಎಂಬ ಪಟ್ಟಣದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ.
ಬಿಡುಗಡೆ: ಕಿಂಗ್ ಆಫ್ ಕೋಥಾ ಮಲಯಾಳಂ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಆಗಸ್ಟ್ 18ರಂದು ಬಿಡುಗಡೆಯಾಗಲಿದೆ.