twitter
    X
    Home ಚಲನಚಿತ್ರಗಳ ಒಳನೋಟ

    ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಸಿನಿಮಾ ಟ್ರೇಲರ್ ಗಳು

    Author Administrator | Updated: Wednesday, June 10, 2020, 08:09 PM [IST]

    ಮೊದಲೆಲ್ಲಾ ಚಿತ್ರಗಳ ಪ್ರಚಾರಕ್ಕೆ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಬಳಿಸುತ್ತಿದ್ದರು. ಜಿಯೋ ಮಾರುಕಟ್ಟೆಗೆ ಬಂದು ಇಂಟರ್ ನೆಟ್ ದರ ಕುಸಿದ ಪರಿಣಾಮ ಎಲ್ಲ ವಲಯಗಳಂತೆ ಸಿನಿಮಾ ರಂಗಕ್ಕೂ ಅನುಕೂಲವಾಯಿತು. ಟೀಸರ್, ಟ್ರೇಲರ್, ಪ್ರೋಮೊ ಹೀಗೆ ಹಲವು ಯೂಟ್ಯೂಬ್ ವೀಡಿಯೋಗಳ ಮುಖಾಂತರ ಚಲನಚಿತ್ರಗಳ ಪ್ರಚಾರ ಮಾಡತೊಡಗಿದರು. ಇದರಿಂದ ಕನ್ನಡ ಚಿತ್ರಗಳ ಮಾರುಕಟ್ಟೆ ಕೂಡ ವಿಸ್ತಾರವಾಯಿತು. ನಂತರ ತಮ್ಮ ನೆಚ್ಚಿನ ನಟರ ಟ್ರೇಲರ್, ಟೀಸರ್ ಗಳನ್ನು ಟ್ಟಿಟ್ಟರ್ ನಲ್ಲಿ ಟ್ರೆಂಡ್ ಮಾಡುವುದು, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಲೈಕ್ ಮಾಡುವುದು, ಹೀಗೆ ಹಲವು ವಿಧಾನಗಳು ಜನಪ್ರಿಯವಾದವು. ಇಲ್ಲಿ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆಗೊಂಡ ಕನ್ನಡ ಟ್ರೇಲರ್ ಗಳನ್ನು ಪಟ್ಟಿ ಮಾಡಲಾಗಿದೆ.. ಈ ಲಿಸ್ಟಿನಲ್ಲಿ ಕೇವಲ ಟ್ರೇಲರ್ ಗಳನ್ನು ಮಾತ್ರ ಪರಿಗಣಿಸಿದ್ದು ಟೀಸರ್ ಮತ್ತು ಪ್ರೋಮೊಸ್ ಗಳನ್ನು ಪರಿಗಣಿಸಿಲ್ಲ.

    cover image

    ಯಜಮಾನ - 21 Million

    2019 ಫೆಬ್ರವರಿ 10 ರಂದು ತೆರೆಕಂಡಿದ್ದ ದರ್ಶನ್ ರ ಯಜಮಾನ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ 21 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಚಿತ್ರದ ಮೊದಲ ಮೋಷನ್ ಪೋಸ್ಟರ್ ಕೂಡ ನಾಲ್ಕು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿತ್ತು.

    ಕೆಜಿಎಫ್ - 20.7 Million

    ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆಜಿಎಫ್ ಚಿತ್ರತಂಡ ಎರಡು ಟ್ರೇಲರ್ ಗಳನ್ನು ರೀಲೀಸ್ ಮಾಡಿತ್ತು. ಮೊದಲ ಟ್ರೇಲರ್ 20 ಮಿಲಿಯನ್ ವೀಕ್ಷಣೆಗೊಂಡರೆ, ಎರಡನೇ ಟ್ರೇಲರ್ 5.3 ಮಿಲಿಯನ್ ವೀಕ್ಷಣೆಗೊಂಡಿದೆ. ಹಿಂದಿಯಲ್ಲಿ ಮೊದಲ ಟ್ರೇಲರ್ 57 ಮಿಲಿಯನ್ ವೀಕ್ಷಣೆಗೊಂಡಿದ್ದು ವಿಶೇಷ.

    ಪೊಗರು - 14 Million

    ಇತ್ತೀಚಿಗಷ್ಟೆ ತೆರೆಕಂಡ ಪೊಗರು ಚಿತ್ರದ ಡೈಲಾಗ್ ಟ್ರೇಲರ್ 14 ಮಿಲಿಯನ್ ವೀಕ್ಷಣೆಗೊಂಡಿದೆ. ಒಂದು ವರ್ಷದ ಹಿಂದೆ ತೆರೆಕಂಡಿದ್ದ ಚಿತ್ರದ ಟೀಸರ್ 6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿತ್ತು.

    ಅವನೇ ಶ್ರೀಮನ್ನಾರಾಯಣ - 11+ Million

    ರಕ್ಷಿತ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ ಅವನೇ ಶ್ರೀಮನ್ನಾರಾಯಣ ಟ್ರೇಲರ್ 11 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

    ಸೀತಾರಾಮ ಕಲ್ಯಾಣ - 7.8 Million

    2019 ಜನೇವರಿ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ 7.6 ಮಿಲಿಯನ್ ವೀಕ್ಷಣೆ ಪಡೆದಿದೆ. ಹಾಗೇ ಇದಕ್ಕೂ ಮೂರು ತಿಂಗಳು ಮುಂಚೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ 7.8 ಮಿಲಿಯನ್ ವೀಕ್ಷಣೆ ಪಡೆದಿದೆ.

    ದಬಾಂಗ್ 3 - 5.9+ Million

    ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಬಾಂಗ್ ಚಿತ್ರದ ಕನ್ನಡ ಟ್ರೇಲರ್ 5.9 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

    ಪೈಲ್ವಾನ್ - 5.1 Million

    ಖುಸ್ತಿ ಕಥೆ ಆಧಾರಿತ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಭಾಷೆಗಳಲ್ಲಿ ತೆರೆಕಂಡಿತ್ತು. 2019 ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್ 5.1 ಮಿಲಿಯನ್ ವೀಕ್ಷಣೆಗೊಂಡಿತದೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಖುಸ್ತಿ ಟೀಸರ್ 6.9 ಮಿಲಿಯನ್ ವೀಕ್ಷಣೆ ಪಡೆದಿದೆ.

    ಕುರುಕ್ಷೇತ್ರ - 4.8 Million

    ಮುನಿರತ್ನ ನಿರ್ಮಾಣದಲ್ಲಿ ಮೂಡಿಬಂದ ದರ್ಶನ್ ರ ಕುರುಕ್ಷೇತ್ರ ಚಿತ್ರದ ಎರಡು ಟ್ರೇಲರ್ ಮತ್ತು ಎರಡು ಟೀಸರ್ ಗಳು ಯೂಟ್ಯೂಬಿನಲ್ಲಿ ಬಿಡುಗಡೆಗೊಂಡಿವೆ. ಇದರಲ್ಲಿ 2019 ಜುಲೈ 24 ರಂದು ಬಿಡುಗಡೆಗೊಂಡ ಟ್ರೇಲರ್ 4.8 ಮಿಲಯನ್ ವೀಕ್ಷಣೆಗೊಂಡರೆ, ನಿಕಿಲ್ ಕುಮಾರಸ್ವಾಮಿ ಪ್ರೋಮೊ ಟೀಸರ್ 4.9 ಮಿಲಿಯನ್ ವೀಕ್ಷಣೆಗೊಂಡಿದೆ.

    ಮಾಸ್ತಿ ಗುಡಿ - 4.7 Million

    2017 ರಲ್ಲಿ ಬಿಡುಗಡೆಗೊಂಡಿದ್ದ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಟ್ರೇಲರ್ 4.7 ಮಿಲಿಯನ್ ವೀಕ್ಷಣೆ ಪಡೆದಿದೆ. ಚಿತ್ರದ ಟ್ರೇಲರ್ ನಲ್ಲಿ ವಿಜಯ್ ಗೆ ನೀಡಿದ್ದ ಸೂಪರ್ ಸ್ಟಾರ್ ಬಿರುದು ಮತ್ತು ಚಿತ್ರದ ಕೊನೆಯ ಹಂತದಲ್ಲಾದ ದುರಂತ ಕೆಲವು ವಿವಾದಗಳನ್ನು ಸೃಷ್ಟಿಸಿತ್ತು.

    ನಟಸಾರ್ವಭೌಮ - 4.5 Million

    ಪುನೀತ್ ರಾಜಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿಬಂದ ನಟಸಾರ್ವಭೌಮ ಚಿತ್ರದ ಟ್ರೇಲರ್ ಜನೇವರಿಯಲ್ಲಿ ಬಿಡುಗಡೆಯಾಗಿತ್ತು. ಚಿತ್ರದ ಟ್ರೇಲರ್ 4.5 ಮಿಲಿಯನ್ ವೀಕ್ಷಣೆ ಪಡೆದಿದೆ.

    ಕಿರಿಕ್ ಪಾರ್ಟಿ - 4.2 Million

    ರಕ್ಷಿತ್ ಶೆಟ್ಟಿ ಮತ್ತು ರಿ‍ಷಭ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಚಿತ್ರ ಯುವ ಪ್ರೇಕ್ಷಕರ ಮನಸ್ಸನ್ನು ಸೊರೆಗೊಂಡಿತು. ಚಿತ್ರದ ಟ್ರೇಲರ್ 4.2 ಮಿಲಿಯನ್ ವೀಕ್ಷಣೆ ಪಡೆದಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X