ಕೋಳಿ ಎಸ್ರು ಸಿನಿಮಾವನ್ನು ಚಂಪಾ ಪಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷತಾ ಪಾಂಡವಪುರ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಪೇಕ್ಷಾ ನಾಗರಾಜು, ನಟನಾ ಮಂಜು, ಪ್ರಕಾಶ್ ಪಿ ಶೆಟ್ಟಿ, ದಕ್ಷಾಯಿಣಿ ಎನ್ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಪ್ರೆನ್ಸಿಸ್ ರಾಜ್‌ಕುಮಾರ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನವಿದೆ.
ಕಾ.ತ. ಚಕ್ಕಣ್ಣನವರ ಕಥೆಯಾಧಾರಿತ ಕೋಳಿ ಎಸ್ರು ಸಿನಿಮಾ ಕಥೆ ಮೈಸೂರು ಗ್ರಾಮೀಣ ಭಾಗದ್ದಾಗಿದೆ. ಈ ಸಿನಿಮಾ ಈಗಾಗಲೇ ನ್ಯೂಯಾರ್ಕ್ ಇಂಡಿಯನ್ ಫೆಸ್ಟಿವಲ್‌ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಜೊತೆಗೆ ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ 'ಅಜಂತಾ ಎಲ್ಲೋರ ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.
ಕಥೆ: ಹಳ್ಳಿಯ ಹೆಣ್ಣುಮಗಳೊಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರು ಮಾಡಿದರೂ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತ್ತಿರುತ್ತಾಳೆ. ತನ್ನ ದಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಆಕೆ ಬದಲಾಗುತ್ತಾಳೆ. ಅದು ಹೇಗೆ ಎಂಬುದೇ ಸಿನಿಮಾದ ಪ್ರಮುಖ ತಿರುಳು.