ನಟರಾಕ್ಷಸ
ಧನಂಜಯ್ ಅಭಿನಯದ 'ಕೋಟಿ' ಸಿನಿಮಾವನ್ನು ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್
ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು, ತಾರಾ, ರಮೇಶ್ ಇಂದಿರಾ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ.
ಫೋಸ್ಟರ್: 2024ರ ಏಪ್ರಿಲ್ 9ರ ಯುಗಾದಿ ಹಬ್ಬದಂದು ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿಎ. ಅದರಲ್ಲಿ 500 ರೂಪಾಯಿ ನೋಟನ್ನು ಮುಖಕ್ಕೆ ಅಂಟಿಸಿ ಮುಖವಾಡ ಮಾಡಿದ್ದು, ಕೋಟಿ ಕನಸು ಕಾಣುವ ಒಬ್ಬ ಕಾಮನ್ ಮ್ಯಾನ್ ಕಥೆ ಎಂದು ಹೇಳುವಂತಿದೆ.
ಬಿಡುಗಡೆ: ಕೋಟಿ ಸಿನಿಮಾ 2024ರ ಜೂನ್ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಓಟಿಟಿ ಬಿಡುಗಡೆ: ಕೋಟಿ ಸಿನಿಮಾ 2024ರ ಆಗಸ್ಟ್ 14ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಯಿತು.