twitter
    X
    Home ಚಲನಚಿತ್ರಗಳ ಒಳನೋಟ

    2022ರಲ್ಲಿ ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಟಾಪ್ 5 ಸೌತ್ ಸಿನಿಮಾಗಳು ಇವು..!

    Author Sowmya Bairappa | Published: Thursday, November 3, 2022, 06:30 PM [IST]

    ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷಿಕ ಪ್ರದೇಶದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿವೆ. ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳು ಮುಂದೆ ಮಕಾಡೆ ಮಲಗಿವೆ. 2 22ರಲ್ಲಿದಕ್ಷಿಣದ ಕೆಜಿಎಫ್‌- 2, ಆರ್​ಆರ್​ಆರ್, ಕಾರ್ತಿಕೇಯ 2, ಪೊನ್ನಿಯಿಲ್ ಸೆಲ್ವನ್, ಕಾಂತಾರ ಸಿನಿಮಾಗಳ ಯಶಸ್ಸು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಸಾಲು ಸಾಲು ದಕ್ಷಿಣ ಭಾರತದ ಚಿತ್ರಗಳು ಹಿಂದಿಗೆ ಡಬ್ ಆಗುತ್ತಿವೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಕ್ಷಿಣದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಹಿಂದಿ ಭಾಷೆಯಲ್ಲಿ ಹವಾ ಸೃಷ್ಟಿಸಿದ ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image

    ಕೆಜಿಎಫ್: ಚಾಪ್ಟರ್ 2

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ 2022 ಏಪ್ರಿಲ್ 14ರಂದು  ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಇದು ಕೆಜಿಎಫ್ ಚಾಪ್ಟರ್ 1ನ ಮುಂದುವರೆದ ಭಾಗ.  ರಾಕಿ ಭಾಯ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು.  

    ಕಾಂತಾರ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ ೩೦ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು.   ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು.  ಕಾಂತಾರದ ಹಿಂದಿ ವರ್ಷನ್‌ ಅಕ್ಟೋಬರ್ 14ರಂದೇ ತೆರೆಕಂಡಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿದೆ.  

    RRR (ಆರ್.ಆರ್.ಆರ್)

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಜೀವನಾಧಾರಿತವಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೀರೋಗಳಾಜಿ ನಟಿಸಿರುವ ಆರ್​ಆರ್​ಆರ್ ಸಿನಿಮಾ ಕೂಡ  ಹಿಂದಿಯಲ್ಲಿ ಧೂಳೆಬ್ಬಿಸಿತ್ತು.  

    ಪೊನ್ನಿಯನ್ ಸೆಲ್ವನ್ ಭಾಗ-1

    ಸೆಪ್ಟೆಂಬರ್ 30ಕ್ಕೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿಲ್ ಸೆಲ್ವನ್ ಭಾಗ-1' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ತೆರೆಗಪ್ಪಳಿಸಿತ್ತು. ಬಹುಕೋಟಿ ವೆಚ್ಚದ ಈ ಸಿನಿಮಾ ಐತಿಹಾಸಿಕ ಕಥಾಹಂದರ ಹೊಂದಿತ್ತು. ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿದವರು ದೃಶ್ಯರೂಪದಲ್ಲಿ ಚೋಳ ಸಾಮ್ರಾಜ್ಯದ ವೈಭವ ಕಂಡು ಬೆರಗಾಗಿದ್ದರು.  
    ಈ ಸಿನಿಮಾಗೆ ಹಿಂದಿ ವಲಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು.  

    ಕಾರ್ತಿಕೇಯ 2

    2014ರಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿ, ಆಗಲೂ ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ ಕಾರ್ತಿಕೇಯ ಚಿತ್ರದ ಸೀಕ್ವೆಲ್ ಕಾರ್ತಿಕೇಯ 2 ಕಳೆದ ಆಗಸ್ಟ್ 13ರಂದು ಬಿಡುಗಡೆಯಾಗಿತ್ತು. ಕಾರ್ತಿಕೇಯ ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ನಂತರ ತೆಲುಗು ಮತ್ತು ಹಿಂದಿ ಎರಡೂ ಭಾಷೆಯಲ್ಲಿಯೂ ಬಿಡುಗಡೆಯಾಗಿತ್ತು.  ಮೂಲ ಹಿಂದಿ ಚಿತ್ರಗಳನ್ನು ಬಾಯ್ಕಾಟ್ ಅಭಿಯಾನದಡಿಯಲ್ಲಿ ತಿರಸ್ಕರಿಸಿದ್ದ ಹಿಂದಿ ಸಿನಿ ಪ್ರೇಕ್ಷಕರು ಪುರಾಣ ಮತ್ತು ಕೃಷ್ಣನ ಕುರಿತಾದ ಚಿತ್ರಕಥೆಯನ್ನು ಹೊಂದಿರುವ ಕಾರ್ತಿಕೇಯ 2 ಚಿತ್ರವನ್ನು ಒಪ್ಪಿ ಅಪ್ಪಿಕೊಂಡರು. ಹೀಗಾಗಿ ಈ ಚಿತ್ರ ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿಯಲ್ಲಿಯೂ ಸಹ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು. ನಟ ನಿಖಿಲ್ ಸಿದ್ಧಾರ್ಥ್, ನಟಿ ಅನುಪಮಾ ಪರಮೇಶ್ವರನ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.    

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X