ಅನಿಲ್ ಮಂಡ್ಯ ನಿರ್ದೇಶನದ `ಕ್ಷತ್ರಿಯ' ಚಿತ್ರದಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಲಿದ್ದಾರೆ. ನಾಯಕಿಯಾಗಿ `ಕೆಮಸ್ಟ್ರಿ ಆಫ್ ಕರಿಯಪ್ಪ' ಚಿತ್ರ ಖ್ಯಾತಿ ಸಂಜನಾ ಆನಂದ್ ಅಭಿನಯಿಸಲಿದ್ದಾರೆ. 2019, ಮೇ 29 ರಂದು ಮಲ್ಲೇಶ್ವರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಚಿತ್ರ ಲಾಂಚ್ ಆಯಿತು.
ಅಣ್ಣನ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡಿದರು. ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕ್ಯಾಮೆರಾಗೆ ಚಾಲನೆ ನೀಡಿದರು.ಅಗಸ್ಟ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿರಂಜೀವಿಯವರ ಸಂಹಾರ ಚಿತ್ರ ನಿರ್ಮಸಿದ್ದ ತಂಡವೇ ಈ ಚಿತ್ರಕ್ಕೂ ಬಂಡವಾಳ ಹೂಡಲಿದೆ. ಧರ್ಮ ವಿಶ್ ಸಂಗೀತ, ಯೋಗರಾಜ್ ಭಟ್ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ, ರವಿವರ್ಮ ಸಾಹಸ ಮತ್ತು ಬಹದ್ದೂರ್ ಚೇತನ್ ಸಂಭಾಷಣೆ ಚಿತ್ರಕ್ಕೆ ಇರಲಿದೆ.