ಎಸ್.ಕೆ.ಎ ಚಾರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಜನಿಕಾಂತ್, ಅಶೋಕ್ ಮತ್ತು ಮಂಜುಳಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿಜಯ ಭಾಸ್ಕರ್ ಸಂಗೀತದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಮ್ ಕಂಠದಲ್ಲಿ ಚಿತ್ರದ ಗೀತೆಗಳು ಮೂಡಿ ಬಂದವು. ಈ ಚಿತ್ರದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ಮಿಂಚಿದರು.
ತಾನು ಪ್ರೀತಿಸಿದ ಹುಡುಗಿ ಬೇರೆವರನ್ನು ವಿವಾಹವಾಗಿದ್ದನನ್ನು ತಿಳಿದು ನೋವನ್ನು ಅನುಭವಿಸಿದ ವೈದ್ಯನು ಮುಂದೆ ತಾನು ಪ್ರೀತಿಸಿದ ಹುಡುಗಿಯ ಗಂಡನಿಗೆ ಪದೇ ಪದೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಬರುತ್ತದೆ.