X
ಲಂಬೋದರ
Comedy | 11 Jan 2019 | U/A |
Kannada

ಲಂಬೋದರ ಕಥೆ

`ದುನಿಯಾ 2' ನಂತರ ಲೂಸ ಮಾದ ಯೋಗಿ ಅಭಿನಯದ ಸಿನಮಾ `ಲಂಬೋದರ'. ನಾಯಕಿಯಾಗಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಕೆ.ಕೃಷ್ಣರಾಜ್ ಈ ಚಿತ್ರದ ನಿರ್ದೇಶನ ಮಾಡಿದ್ದು ವಿಶ್ವೇಶ್ವರ್ ಮತ್ತು ರಾಘವೇಂದ್ರ ಭಟ್ ನಿರ್ಮಾಣ ಮಾಡಿದ್ದಾರೆ.ಚಿತ್ರದಲ್ಲಿ ಭೂಮಿಕಾ ಶೆಟ್ಟಿ,ಅಚ್ಯುತ್ ಕುಮಾರ್, ಸಿದ್ದು ಮೂಲಿಮನಿ,ಅರುಣಾ ಬಾಲರಾಜ್,ಮಂಜುನಾಥ ಹೆಗಡೆ, ಗೋಪಾಲ್ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಯೋಗಿ ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ನಂತರ ಮತ್ತೆ ವಿಧ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಥೆ

ಲಂಬೋದರ (ಯೋಗೇಶ್) ಮಧ್ಯಮವರ್ಗ ಕುಟುಂಬದ ಹುಡುಗ. ತನ್ನಿಬ್ಬರು ಗೆಳೆಯರಾದ ಡಬಸ್ಮಾಶ್ ಡ್ಯಾನಿ (ಸಿದ್ದು ಮೂಲಿಮನಿ) ಮತ್ತು ಕೇದರನಾಥ್ (ಧರ್ಮಣ್ಣ ಕಡೂರು) ಜೊತೆ ಸೇರಿ ಯಾವುದೇ ಕೆಲಸಕ್ಕೂ ಪ್ರಯೋಜನವಿಲ್ಲದೇ ಅಲೆದಾಡುವ ಪೋಕರಿ.ನೆರೆಹೊರೆಯವರಿಗೂ ಹೊರೆಯಾದ ಲಂಬೋದರ ಎನಾದರೂ ಮಾಡಬೇಕೆಂದು ಹೊರಟು ಪಟಾಕಿ ಅಂಗಡಿಯೊಂದನ್ನು ತೆಗೆಯುತ್ತಾನೆ. ಆದರೆ ಅಲ್ಲಿಯೂ ಕೈ ಸುಟ್ಟಿಕೊಳ್ಳುವ ಇವನು ಕೊನೆಗೆ ತನ್ನನ್ನು ಸದಾ ಜರಿಯುವ ಪೋಷಕ-ಬಂಧು ವರ್ಗದ ಮುಂದೆ ಉತ್ತಮನೆಂದು ತೋರಿಸಲು ಒಂದು ಒಳ್ಳೆ ಹುಡುಗಿಯನ್ನಾದರೂ ಮದುವೆಯಾಗಿ ತೋರಿಸಬೇಕೆಂದು ನಿರ್ಧರಿಸುತ್ತಾನೆ.

ಕೆಲವು ವಿಫಲ ಪ್ರಯತ್ನಗಳ ನಂತರ ನಿತ್ಯಾ (ಆಕಾಂಕ್ಷಾ)ಒಬ್ಬ ಸಮಾಜಮುಖಿ ಹುಡುಗಿಯನ್ನು ಒಲಿಸುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ನಂತರ ಇನ್ನೇನು ಸುಗಮವಾಗಿ ಸಾಗಬೇಕಿದ್ದ ಪ್ರೇಮದಲ್ಲಿ ನಿತ್ಯಾಳಿಗೆ ಲಂಬೋದರನ ನಿಜರೂಪದ ದರ್ಶನವಾಗುತ್ತದೆ.ಇಲ್ಲಿಂದ ಮುಂದೆ ಈ ಪ್ರೇಮದ ತಿರುವುಗಳೇನು ಎನ್ನುವುದು ಚಿತ್ರದ ಮೂಲ ತಿರುಳು. ಚಿತ್ರದಲ್ಲಿ ಲಂಬೋದರನ ಶಾಲಾದಿನಗಳ ದರ್ಶನ ಕೂಡ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+