ಲಂಗೋಟಿ ಮ್ಯಾನ್ ಸಿನಿಮಾವನ್ನು ಸಂಜೋತಾ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಕಾಶ್ ರ‍್ಯಾಂಬೋ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಸಂಹಿತಾ ವಿನ್ಯಾ, ಸ್ನೇಹ ಖುಷಿ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್‌ಕುಮಾರ್, ಮಹಾಲಕ್ಷ್ಮೀ ವಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸುಮೇದ್ ಸಂಗೀತ, ರವಿವರ್ಮಾ ಛಾಯಾಗ್ರಹಣ ಹಾಗೂ ಮನು & ಸ್ವರಾಕ್ ಪತ್ರಿಮಠ ಸಂಕಲನ ಸಿನಿಮಾಗಿದೆ.
ತಾತ ಹಾಗೂ ಮೊಮ್ಮಗನ ಸುತ್ತ ನಡೆಯುವ ಕಥೆ ಇದಾಗಿದ್ದು, ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು ಎಂಬುದು ತಾತನ ಬಯಕೆ. ಮೊಮ್ಮಗನಿಗೆ ಅಂಡರ್ವೇರ್ ಹಾಕಿಕೊಳ್ಳುವ ಆಸೆ. ತಾತಾ ಬದುಕಿರುವ ತನಕ ಅಂಡರ್ವೇರ್ ಹಾಕಲು ಬಿಡುವುದಿಲ್ಲ. ಈ ರೀತಿಯ ಹಾಸ್ಯಮಯ ಕಥೆ ನಮ್ಮ ಸಿನಿಮಾದಲ್ಲಿದೆ.
ಬಿಡುಗಡೆ: ಲಂಗೋಟಿ ಮ್ಯಾನ್ ಸಿನಿಮಾ 2024ರ ಸೆಪ್ಟಂಬರ್ 20ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.