ಲೈಫ್ ಜೊತೆ ಒಂದ್ ಸೆಲ್ಫಿ (2018)(U/A)
Release date
24 Aug 2018
genre
ಲೈಫ್ ಜೊತೆ ಒಂದ್ ಸೆಲ್ಫಿ ಕಥೆ
'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದಲ್ಲಿ ಒಂದಲ್ಲಾ ಎರಡಲ್ಲಾ ಮೂರು ಕಥೆಗಳು ಇವೆ. ನಕುಲ್ (ನೆನಪಿರಲಿ ಪ್ರೇಮ್), ರಶ್ಮಿ (ಹರಿಪ್ರಿಯಾ), ವಿರಾಟ್ (ಪ್ರಜ್ವಲ್ ದೇವರಾಜ್) ಮೂವರಿಗೂ ಜೀವನದಲ್ಲಿ ಒಂದೊಂದು ವೈಯಕ್ತಿಯ ಸಮಸ್ಯೆ ಇರುತ್ತದೆ. ನಿರ್ದೇಶಕನಾಗ ಬೇಕು ಎಂದುಕೊಂಡ ನುಕುಲ್, ನಿಶ್ಚಿತಾರ್ಥದ ನಂತರ ಬ್ರೇಕ್ ಅಪ್ ಆಗುವ ರಶ್ಮಿ ಹಾಗೂ ತಾಯಿಯ ಅಸ್ತಿತ್ವಕ್ಕಾಗಿ ಮನೆಯವರ ಜೊತೆಗೆ ಜಗಳ ಮಾಡಿಕೊಂಡ ವಿವೇಕ್ ಈ ಮೂವರು ತಮ್ಮ ನೆಮ್ಮದಿಗಾಗಿ ಗೋವಾಗೆ ಬರುತ್ತಾರೆ. ಇಡೀ ಕಥೆ ಗೋವಾದಲ್ಲಿಯೇ ನಡೆಯುತ್ತದೆ.ಸಿನಿಮಾ ನೋಡುವವರು ಇಲ್ಲಿ ಇರುವುದು ಮೂರು ಪ್ರಮುಖ ಪಾತ್ರಗಳ ಕಥೆ ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ನಾಲ್ಕನೇ ಕಥೆ ಶುರು ಆಗುತ್ತದೆ. ಆ ನಾಲ್ಕನೇ ಕಥೆಯೇ ಸಿನಿಮಾದ ಉಸಿರು. ವಿವೇಕ್ ತಾಯಿ ತುಳಸಿ (ಸುಧಾರಾಣಿ) ಪಾತ್ರದ ಮೇಲೆ ಸಿನಿಮಾ ಸೆಕೆಂಡ್ ಹಾಫ್ ನಿಂತಿದೆ.
**Note:Hey! Would you like to share the story of the movie ಲೈಫ್ ಜೊತೆ ಒಂದ್ ಸೆಲ್ಫಿ with us? Please send it to us ([email protected]).