ಲವ್ ಬರ್ಡ್ಸ್ ಸಿನಿಮಾಗೆ ನಿದೇಶಕ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದಲ್ಲಿ ಲವ್ ಬರ್ಡ್ಸ್ ಎಂದೇ ಕರೆಯಲ್ಪಡುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಲವ್ ಬರ್ಡ್ಸ್ ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ವಕೀಲೆಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್ ಸೇರಿದಂತೆ ಹಲವಾರು ಪೋಷಕ ಪಾತ್ರ ನಿರ್ವಹಿಸಿದ್ದಾರೆ.
ಕಥೆ: ಲವ್ ಬರ್ಡ್ಸ್ ಸಿನಿಮಾದಲ್ಲಿ ಗಂಡ-ಹೆಂಡತಿ ಬಗೆಗಿನ ಕಥೆಯಿದ್ದ, ಮದುವೆಯನ್ನು ಹೇಗೆ ಸುಂದರವಾಗಿಸಿಕೊಳ್ಳಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಫ್ಯಾಶನ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆ: ಲವ್ ಬರ್ಡ್ಸ್ ಸಿನಿಮಾ 2023ರ ಫೆಬ್ರವರಿ 17ರಂದು ಬಿಡುಗಡೆಯಾಗಿದೆ.