ನಟ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿರುವ ಚಿತ್ರ `ಲವ್ ಮಾಕ್‌ಟೇಲ್'. ಚಿತ್ರದಲ್ಲಿ ತಾವೇ ನಾಯಕನಾಗಿ ಮತ್ತು ಮಿಲನ ನಾಗರಾಜ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಥೆ ಸಂಭಾಷಣೆ ಬರೆದಿರುವ ಕೃಷ್ಣ ನಾಯಕನಾಗುವುದಕ್ಕೂ ಮೊದಲು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಚಿತ್ರದ ಟ್ರೇಲರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಟ್ರೇಲರ್ ನಲ್ಲಿ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯಿತ್ತು.
ಕಥೆ: ಸ್ಕೂಲ್ ನಲ್ಲಿ ಒಂದು.. ಕಾಲೇಜ್ ನಲ್ಲಿ ಒಂದು.. ಹೀಗೆ ನಾಯಕ ಆದಿಗೆ (ಡಾರ್ಲಿಂಗ್ ಕೃಷ್ಣ) ಲವ್ ಆಗುತ್ತಲೇ ಇರುತ್ತದೆ. ನಿಜವಾದ ಪ್ರೀತಿಯ ಹುಡುಕಾಟದ ನಟನಿಗೆ ಮತ್ತೆ ಮತ್ತೆ ಪ್ಯಾರ್ ಗೆ ಆಗ್ಬಿಡ್ ತೈತೆ. ಹೀಗೆ ಆದಿ ಜೀವನದ ವಿಧವಿಧವಾದ ಪ್ರೇಮಕಥೆಗಳು ಸಿನಿಮಾ ಕಥೆಯಾಗಿದೆ. ಕೊನೆಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಅರ್ಥ ಮಾಡಿಸುತ್ತಾರೆ.