ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ `ಲವ್ ಯು ರಚ್ಚು' ಚಿತ್ರಕ್ಕೆ ನವ ನಿರ್ದೇಶಕ ಶಂಕರ್ ರಾಜ್ ಆ್ಯಕ್ಸನ್ ಕಟ್ ಹೇಳಿದ್ದಾರೆ. ಅಜೇಯ ರಾವ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಕಥೆಯನ್ನು ಶಶಾಂಕ್ ಬರೆದಿದ್ದಾರೆ. ಈ ರೋಮ್ಯಾಂಟಿಕ್ ಚಿತ್ರಕ್ಕೆ ಮಣಿಕಂಠ್ ಕದ್ರಿ ಸಂಗೀತ ನೀಡಿದ್ದಾರೆ.ಕಥೆ
ಇದು ಅತಿಯಾಗಿ ಪ್ರೀತಿಸೋ ಗಂಡ, ಹೆಂಡತಿಯ ಕಥೆ. ಹಾಗಾಗಿ ಹೆಂಡತಿ ಹುಟ್ಟು ಹಬ್ಬಕ್ಕೆ ಪತಿ ಉತ್ತಮ ಉಡುಗೊರೆ ಕೊಡಬೇಕಲ್ಲವಾ?. ಹಾಗೇ ನಟ ಅಜಯ್ ಕೂಡ ದುಬಾರಿ ಉಡುಗೊರೆ ಖರೀದಿಸಿ ಪತ್ನಿಗಾಗಿ ಕೊಂಡೊಯ್ಯುತ್ತಾನೆ. ಇಲ್ಲಿಂದ ರಚ್ಚು ಮತ್ತು ಅಜಯ್ ಕಥೆ ಶುರುವಾಗುತ್ತೆ.
ನಂತರ ಚಿತ್ರದಲ್ಲಿ ಒಂದು ಕ್ರೈಮ್ ನಡೆಯುತ್ತದೆ. ಅದಕ್ಕೆ ಕಾರಣ ನಾಯಕಿ ಆಗಿರುತ್ತಾಳೆ. ಅದರಿಂದ ನಟಿಯನ್ನು ಹೊರ ತರಲು ನಾಯಕ ಎಷ್ಟೆಲ್ಲಾ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ತಿರುಳು.