ಡಾ. ಸುನೀಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ` ಮಹಾ ರೌದ್ರಂ' ಚಿತ್ರದಲ್ಲಿ ಮಹೇಶ್ ಮತ್ತು ಆದ್ಯಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಂಶಿ ಎಸ್ ಬಂಡವಾಳ ಹೂಡಿದ್ದಾರೆ. ಕೆ.ಎಂ.ಪ್ರಕಾಶ್ ಚಿತ್ರಕ್ಕೆ ಸಂಕಲನ ನೀಡಿದ್ದಾರೆ.
ಕಥೆ
ಸಮಾನ್ಯ ಕುಟುಂಬದ ಮಹೇಶ್ ತನ್ನ ತಾಯಿ ಮತ್ತು ಪ್ರೇಯಸಿ ಜೊತೆ ಖುಷಿಯಾದ ಜೀವನ ನೆಡೆಸುತ್ತಿರುತ್ತಾನೆ. ಆದರೆ ಕೆಲ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕದಿಂದ ಅವನ ಶಾಂತಿಯುತವಾದ ಕುಟುಂಬ ಮತ್ತು ಪ್ರೀತಿ ಎರಡಕ್ಕೂ ಧಕ್ಕೆಯುಂಟಾಗುತ್ತದೆ. ಮಹೇಶ್, ಅವನ ತಾಯಿ ಮತ್ತು ಸಂಗಾತಿಯ ಜೀವನ ಮುಂದೆ ಹೇಗೆ ಸಾಗುತ್ತದೆ ಎಂಬುದು ಚಿತ್ರದ ಕಥೆ.