ಮನದ ಕಡಲು ಸಿನಿಮಾವನ್ನು
ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ಸುಮುಖ್ ನಾಯಕನಾಗಿ ಹಾಗೂ
ರಾಶಿಕಾ ಶೆಟ್ಟಿ,
ಅಂಜಲಿ ಅನೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ನೇತ್ರಾ, ಶಿವಧ್ವಜ್, ರಂಗಾಯಣ ರಘು, ದತ್ತಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ವಿ. ಹರಿಕೃಷ್ಣ ಸಂಗೀತ ಸಿನಿಮಾಗಿದೆ. ಈ ಸಿನಿಮಾವನ್ನು ಮುಂಗಾರು ಮಳೆ, ಮೊಗ್ಗಿನ ಮನಸು ಹಾಗೂ ಮತ್ತೆ ಮುಂಗಾರು ಚಿತ್ರಗಳನ್ನು ನಿರ್ಮಿಸಿರುವ ಮಾಜಿ ಎಂಎಲ್‌ಸಿ
ಇ.ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ.
ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ವೈದ್ಯನೊಬ್ಬನ ಜೀವನದ ಪ್ರೇಮ್ ಕಹಾನಿಯನ್ನು ಈ ಚಿತ್ರದಲ್ಲಿ ಭಟ್ರು ಬಿಚ್ಚಿಡಲಿದ್ದಾರೆ.