ಮಂಡ್ಯಹೈದ ಸಿನಿಮಾವನ್ನು ಸಿನಿಮಾವನ್ನು ಶ್ರೀಕಾಂತ್ ಪಾಂಡವಪುರ ನಿರ್ದೇಶಕ ಮಾಡಿದ್ದಾರೆ. ಚಿತ್ರದಲ್ಲಿ ಅಭಯ್ ಚಂದ್ರು ನಾಯಕನಾಗಿ ಹಾಗೂ ಭೂಮಿಕಾ ಭೂಮೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಚಿದಾನಂದ ಪೂಜಾರಿ, ಪ್ರವೀಣ್ ಜೈನ್, ಸದಾನಂದ ಕಲಿ, ಮನೋಹರ್ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.
ಈ ಹಿಂದೆ ಕಿನಾರೆ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸುರೇಂದ್ರನಾಥ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕವಿರತ್ನ ವಿ ನಾಗೇಂದ್ರ ಪ್ರಸಾದ್, ವೆಂಕಟೇಶ್ ಕುಲಕರ್ಣಿ, ರವಿ ತಪಸ್ವಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹೊಸ ಪ್ರತಿಭೆ ಮನುಗೌಡ ಛಾಯಾಗ್ರಾಹಕನಾಗಿ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಚಂದ್ರಶೇಖರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಮಂಡ್ಯಹೈದ ಸಿನಿಮಾ ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.