ತಮಿಳು ಚಿತ್ರರಂಗದಲ್ಲಿ ತಲೈವಾ ಎಂದೇ ಖ್ಯಾತಿಯಾಗಿರುವ ರಜನಿಕಾಂತ್ ಪ್ರಸ್ತುತ ಭಾರತೀಯ ಚಿತ್ರರಂಗದ ಪ್ರಮುಖ ನಟರೊಲ್ಲಬ್ಬರು. ಬೆಂಗಳೂರಿನಲ್ಲಿ ಜನಿಸಿದ ಶಿವಾಜಿರಾವ್ ಗಾಯಕವಾಡ್ ನಂತರ ತಮಿಳು ಚಿತ್ರರಂಗದ ಮೂಲಕ ಭಾರತದ ಖ್ಯಾತ ನಟನಾಗಿ ಬೆಳೆದಿದ್ದು ಇತಿಹಾಸ. ತಮ್ಮ ಸಿನಿಜೀವನದ ಆರಂಭದಲ್ಲಿ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದೇ ಸಮಯದಲ್ಲಿ ತಮಿಳು ಚಿತ್ರರಂಗದಲ್ಲಿ ಮನ್ನಣೆ ಸಿಗಲಾರಂಭಿಸಿದ್ದರಿಂದ ಸಂಫೂರ್ಣವಾಗಿ ತಮಿಳು ಚಿತ್ರರಂಗದಲ್ಲಿ ತೊಡಿಗಿಸಿಕೊಂಡರು. ಡಾ. ರಾಜಕುಮಾರ್ ಮೇಲೆ ಅಪಾರ ಅಭಿಮಾನ ಹೊಂದಿರುವ ರಜನಿ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಪರಮಾಪ್ತ ಸ್ನೇಹಿತರಾಗಿದ್ದರು. ರಜಿನಿಕಾಂತ್ ಅವರು ಕನ್ನಡದಲ್ಲಿ ನಟಿಸಿದ ಎಲ್ಲಾ ಚಿತ್ರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಮತ್ತು ಅವರ ಸಿನಿ ಬದುಕಿನ ಎರಡನೇ ಚಿತ್ರ. ಈ ಚಿತ್ರದಲ್ಲಿ ಪುಟ್ಟಣ್ಣನವರು ಒಂದು ಚಿತ್ರದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಚಿತ್ರ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಚಿತ್ರದಲ್ಲಿ ರಜನಿಕಾಂತ್ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು.
Rajanikanth Kannada Movies List In Kannada-Katha Sangama 1976/top-listing/rajanikanth-kannada-movies-list-in-kannada-katha-sangama-1976-3-2336-202.html
80 ರ ದಶಕದಲ್ಲಿಯೇ ಈ ಚಿತ್ರ ಕ್ರಾಂತಿಕಾರಿ ಸಾಮಾಜಿಕ ಕಥೆಯನ್ನು ಹೊಂದಿತ್ತು. ಅಚಾತುರ್ಯದಿಂದ ತನ್ನ ಸಂಗಾತಿಯೊಡನೆ ಒಂದು ರಾತ್ರಿ ಕಳೆಯುವ ನಾಯಕಿ ತನ್ನ ಸಂಗಾತಿ ಕಣ್ಮರೆಯಾದಾಗ ಬೇರೆಯವನನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಹಲವು ವರ್ಷಗಳ ನಂತರ ಮತ್ತೆ ಅವಳ ಬಾಳಲ್ಲಿ ಬರುವ ಪ್ರಿಯಕರ ಅವಳ ಬಾಳಲ್ಲಿ ಹೇಗೆ ಬಿರುಗಾಳೆ ತರುತ್ತಾನೆ ಎಂಬುದನ್ನ ಚಿತ್ರ ತೋರಿಸಿತು.
Rajanikanth Kannada Movies List In Kannada-Baalu Jenu/top-listing/rajanikanth-kannada-movies-list-in-kannada-baalu-jenu-3-2335-202.html
ಜೋಸೈಮನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಜನಿಕಾಂತ್, ಅಶೋಕ್, ಶಾರದಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪನವರ ಛಾಯಾಗ್ರಹಣವಿತ್ತು.
Rajanikanth Kannada Movies List In Kannada-Ondu Premada Kathe/top-listing/rajanikanth-kannada-movies-list-in-kannada-ondu-premada-kathe-3-2341-202.html