ಯುವಿನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ `ಮಂಗಳವಾರ ರಜಾದಿನ' ಚಿತ್ರದಲ್ಲಿ ಚಂದನ್ ಆಚಾರ್ ಮತ್ತು ಲಾಸ್ಯ ನಾಗರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಹರಿಣಿ ಚಂದ್ರ ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಪ್ರಜೋತ್ ಸಂಗೀತ ಮತ್ತು ರಿತ್ವಿಕ್ ಮುರಳೀಧರ್ ಹಿನ್ನಲೆ ಸಂಗೀತವಿದೆ. ಚಿತ್ರದ ಹಾಡುಗಳು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಕುಂಚದಲ್ಲಿ ಅರಳಿವೆ. ತ್ರಿವರ್ಗ್ ಫಿಲ್ಮಂಸ್ ಅಡಿಯಲ್ಲಿ ನಿರ್ಮಾಣವಾಗಿದೆ.
ಈ ಚಿತ್ರದಲ್ಲಿ ಚಂದನ್, ಕಿಚ್ಚ ಸುದೀಪ್ ರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಕಟಿಂಗ್ ಶಾಪ್ ಒಂದನ್ನು ನೆಡೆಸುವ ಚಿತ್ರದ ನಾಯಕನಿಗೆ ತನ್ನ ನೆಚ್ಚಿನ ನಾಯಕ ಸುದೀಪ್ ಗೆ ಹೇರ್ ಸ್ಟೈಲ್ ಮಾಡುವ ಬಯಕೆ. ಚಿತ್ರದ ಟ್ರೇಲರ್ 2020 ಮಾರ್ಚ್ 3 ರಂದು ಬಿಡುಗಡೆಯಾಯಿತು. ಕಿಚ್ಚ ಸುದೀಪ್ ತಮ್ಮ ಅಧಿಕೃತ ಟ್ಟಿಟರ್ ಅಕೌಂಟ್ ನಿಂದ ಟ್ರೇಲರ್ ನ್ನು ಟ್ವೀಟ್ ಮಾಡಿದರು.