ಮೆಲೋಡಿ ಡ್ರಾಮ ಸಿನಿಮಾವನ್ನು ಮಂಜು ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸತ್ಯ ಶ್ರಯ ನಾಯಕನಾಗಿ ಮತ್ತು ಸುಪ್ರಿತ ಸತ್ಯನಾರಾಯಣ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಯಣ ರಘು, ಅನು ಪ್ರಭಾಕರ್, ಚೇತನ್ ಚಂದ್ರ, ರಾಜೇಶ್ ನಟರಂಗ, ಬಾಲಾ ರಾಜ್ವಾಡಿ ಸಿನಿಮಾದಲ್ಲಿದ್ದಾರೆ. ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು, ಕೈಲಾಶ್ ಖೇರ್, ಸೋನು ನಿಗಮ್, ಪಲಾಕ್ ಮುಚ್ಚಲ್ ಮುಂತಾದವರ ಕಂಠ ಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.