2019 ರ ಕನ್ನಡ ಚಿತ್ರರಂಗದ ಮೊದಲ ಆರು ತಿಂಗಳ ರಿಪೋರ್ಟ್ - ಗಮನ ಸೆಳೆದ 10 ಚಿತ್ರಗಳು

  2019 ವರ್ಷ ಆರಂಭವಾಗಿ ಆರು ತಿಂಗಳು ಕಳೆದಿದೆ. ವರ್ಷದ ಮೊದಲಾರ್ಧದಲ್ಲಿ ನೂರಕ್ಕಿಂತ ಹೆಚ್ಚು ಚಿತ್ರಗಳು ತೆರೆಕಂಡರೂ ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಯಶಸ್ಸು ಕಂಡಿವೆ. ಕೆಲವು ಬಹುನಿರೀಕ್ಷಿತ ಚಿತ್ರಗಳು ನೆಲ ಕಚ್ಚಿದರೆ, ಕೆಲವು ಸ್ತಬ್ಧವಾಗಿ ಬಿಡುಗಡೆಯಾಗಿ ನಂತರ ಚಿತ್ರಮಂದಿರಗಳಲ್ಲಿ ಸದ್ದು ಮಾಡಿದವು. ಹೀಗೆ ಈ ವರ್ಷದ ಮೊದಲಾರ್ಧದಲ್ಲಿ ಗಮನ ಸೆಳೆದ 10 ಚಿತ್ರಗಳನ್ನು ಕೆಳೆಗೆ ನೀಡಲಾಗಿದೆ.ಚಿತ್ರಗಳು ತೆರೆಗೆ ಬಂದ ತಿಂಗಳಾನುಕ್ರಮದಲ್ಲಿ ಪಟ್ಟಿ ಮಾಡಲಾಗಿದೆ.

  1. ಸೀತಾರಾಮ ಕಲ್ಯಾಣ (ಬಿಡುಗಡೆ- ಜನೇವರಿ)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  25 Jan 2019

  ಅಮ್ಮ ಮಗಳ ಸೆಂಟಿಮೆಂಟ್, ತಂದೆ ಮಗನ ಬಾಂದವ್ಯ, ನಾಯಕ ನಾಯಕಿಯ ಲವ್ ಸ್ಟೋರಿ, ಗೆಳೆಯರ ಜೊತೆಗಿನ ಕೀಟಲೆ, ಆಗಾಗ ಆಕ್ಷನ್, ಬೇಕಾದಷ್ಟು ಡೈಲಾಗ್ಸ್ ಮೂಲಕ ಗಮನ ಸೆಳೆದ ಸೀತಾರಾಮ ಕಲ್ಯಾಣ ಜನೇವರಿಯಲ್ಲಿ ತೆರೆಕಂಡಿತು. ಚಿತ್ರ ಬಾಕ್ಸಾಫೀಸಿನಲ್ಲಿ 22 ಕೋಟಿಗೆ ಹೆಚ್ಚು ಗಳಿಕೆ ಕಂಡಿತು.

  2. ನಟಸಾರ್ವಭೌಮ (ಬಿಡುಗಡೆ- ಫೆಬ್ರವರಿ)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  07 Feb 2019

  ಮೊತ್ತಮೊದಲ ಬಾರಿಗೆ ಪುನೀತ್ ರಾಜಕುಮಾರ್ ಹಾರರ್ ಚಿತ್ರದಲ್ಲಿ ನಟಿಸಿದರು. ಪುನೀತ್ ಫೈಟ್ ಮತ್ತು ಡ್ಯಾನ್ಸ್ ಚಿತ್ರದ ಹೈಲೈಟ್. ಪ್ರೇಮ, ಪ್ರೀತಿ, ನಗು, ಸಾಹಸ, ರೋಚಕತೆ, ಭಾವುಕತೆ ಹೀಗೆ ಎಲ್ಲ ಅಂಶಗಳ ಶುದ್ಧ ಮನರಂಜನೆ ನೀಡಿದ ಈ  ಚಿತ್ರ ತೆರೆಕಂಡ ಮೊದಲ ವಾರದಲ್ಲಿ ಕರ್ನಾಟಕವೊಂದರಲ್ಲಿಯೇ ಸುಮಾರು 28 ಕೋಟಿ ಗಳಿಕೆ ಕಂಡಿತು.

  3. ಬೆಲ್ ಬಾಟಮ್ (ಬಿಡುಗಡೆ- ಫೆಬ್ರವರಿ)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  15 Feb 2019

  ಡಿಟೆಕ್ಟಿವ್ ದಿವಾಕರನಾಗಿ ಬಂದ ರಿಷಭ್ ಶೆಟ್ಟಿ ಪ್ರೇಕ್ಷಕರ ಮತ್ತು ವಿಮರ್ಶಕರ ಮನ ಗೆದ್ದರು. 80 ರ ದಶಕದ ಕಥಾನಕ ಹೊಂದಿದ್ದ ಈ ಚಿತ್ರ ಕರ್ನಾಟಕದಲ್ಲಿ ಸುಮಾರು 125 ದಿನ ಪ್ರದರ್ಶನ ಕಂಡು ಅಮೇರಿಕ, ಸಿಂಗಾಪೂರ್, ಜಪಾನ್ ಮುಂತಾದ  ವಿದೇಶಗಳಲ್ಲಿ ಕೂಡ ಪ್ರದರ್ಶನ ಕಂಡಿತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X