ಮಿಂಚಾಗಿ ನೀ ಬರಲು ಈ ಸಿನಿಮಾ ಆಕ್ಷನ್ ರೋಮ್ಯಾನ್ಸ್ ನಿಂದ ಕೂಡಿದೆ. ಇದರಲ್ಲಿ ದೂದ್ ಪೇಡಾ ದಿಗಂತ್ ಮತ್ತು ಕೃತಿ ಖರಬಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಗೆ ದೀಲಿಪ್ ರಾಜ್ ಹಾಗೂ ರಮೇಶ್ ಭಟ್ ಸಾಥ್ ನೀಡಿದ್ದಾರೆ.
ಈ ಚಿತ್ರಕ್ಕೆ ರಣದೀಪ್ ಸತರಾಮ್ ಮಹದಿಕ್ ನಿರ್ದೇಶನ ನೀಡಿದ್ದಾರೆ. ರಣದೀಪ್ ಸತರಾಮ್ ಮಹದಿಕ್, ಮಹೇಶ ತಲಕಾಡು ಮತ್ತು ಮಹೇಶ್ ಕುಮಾರ್ ಜೈಸ್ವಾಲ್ ಈ ತ್ರೀ ಮೂರ್ತಿಗಳು ನಿರ್ಮಾಪಕರಾಗಿದ್ದಾರೆ. ವಿ ಹರಿಕೃಷ್ಣ ತಮ್ಮ ಸಂಗೀತ ನಾದವನ್ನು ಈ ಚಿತ್ರಕ್ಕೆ ನೀಡಿದ್ದಾರೆ.