ಮಿಥ್ಯ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಾಸ್ಟರ್ ಅತೀಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಕಾಶ್ ತುಮಿನಾಡು, ರೂಪ ವರ್ಕಾಡ್ ಮುಂತಾದವರು ತಾರಾಗಣದಲ್ಲಿದ್ದಾರೆ. ಮಿಥುನ್ ಮುಕುಂದನ್ ಸಂಗೀತ, ಉದಿತ್ ಕುರಾನ ಛಾಯಾಗ್ರಹಣ ಹಾಗೂ ಭುವನೇಶ್ ಮಣಿವಣನ್ ಸಂಕಲವಿದೆ. ಮಿಥ್ಯ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಕಥೆ: ಹನ್ನೊಂದನೆ ವಯಸ್ಸಿಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಿಥನ್ ಎಂಬ ಹುಡುಗನೊಬ್ಬ ಮುಂಬೈನಿಂದ ಉಡುಪಿಗೆ ಬಂದು ಚಿಕ್ಕಪ್ಪ & ಚಿಕ್ಕಮ್ಮನ ಆಶ್ರಯ ಪಡೆಯುತ್ತಾನೆ. ನಂತರ ಹೊಸ ಪ್ರಪಂಚದ ಹುಡುಕಾಟ, ಹಳೆಯ ಸಂಬಂಧಗಳಲ್ಲಿ ಹೊಸತನವನ್ನು ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಗೆಳೆತನ ಹುಡುಕುವ ಪಯಣಕ್ಕೆ ಮುಂದಾಗುತ್ತಾನೆ. ಇದು ಸಿನಿಮಾದ ಪ್ರಮುಖ ಕಥಾಹಂದರವಾಗಿದ್ದರೂ, ಇದು ಮಕ್ಕಳ ಸಿನಿಮಾವಲ್ಲ.