ಗುರುದತ್ತ್ ಶ್ರೀಕಾಂತ್ ನಿರ್ದೇಶನ ಮಾಡಿರುವ `ಮೂಕವಿಸ್ಮಿತ' ಚಿತ್ರವು ಖ್ಯಾತ ನಾಟಕಕಾರ `ಟಿ.ಪಿ.ಕೈಲಾಸಂ'ರವರ ಸುಪ್ರಸಿದ್ಧ `ಟೊಳ್ಳು-ಗಟ್ಟಿ' ನಾಟಕದ ಚಿತ್ರ ಅವತರಣಿಕೆಯಾಗಿದೆ. ಚಿತ್ರಕ್ಕೆ ಡಾ.ಚಿನ್ಮಯ್ ಎಂ ರಾವ್ ರವರ ಸಂಗೀತವಿದ್ದು, ಸಿದ್ದು ಜಿ.ಎಸ್ ಛಾಯಾಗ್ರಹಣವಿದೆ.
ಚಿತ್ರದಲ್ಲಿ ಸಂದೀಪ್ ಮಲಾನಿ, ನಿರ್ದೇಶಕ ಗುರುದತ್ತ್ ಶ್ರೀಕಾಂತ್, ಚಂದ್ರಕೀರ್ತೀ, ವಾಣಿಶ್ರೀ ಭಟ್, ಮಾವಳ್ಳಿ ಕಾರ್ತಿಕ್, ಶುಭಾರಕ್ಷ ಮುಂತಾದವರು ನಟಿಸಿದ್ದಾರೆ.