ಮೂರನೇ ಕೃಷ್ಣಪ್ಪ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಂಪತ್ ಮೈತ್ರಿಯಾ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಶ್ರೀಪ್ರಿಯಾ, ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಗಣದಲ್ಲಿದ್ದಾರೆ.
ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ. ರೆಡ್ ಡ್ರಾಗ್ಯನ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಮೋಹನ್ ರೆಡ್ಡಿ ಜಿ ಮತ್ತು ರವಿಶಂಕರ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆನೇಕಲ್ ಭಾಗದ ಕಥೆಯನ್ನು ಹೆಣೆಯಲಾಗಿದೆ.