ಮಿ.ಬ್ಯಾಚುಲರ್ ಸಿನಿಮಾವನ್ನು ನಾಯ್ಡು ಬಂಡಾರ್ ನಿರ್ದೇಶನ ಮಾಡುತಿದ್ದಾರೆ. ಇದೊಂದು ರೋಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್ ಮತ್ತು ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಾಧುಕೋಕಿಲ, ಚಿಕ್ಕಣ್ಣ, ಪವಿತ್ರ ಲೋಕೇಶ್, ಅಯ್ಯಪ್ಪ ಶರ್ಮಾ, ಯಶ್ ಶೆಟ್ಟಿ ಸೇರಿದಂತೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೀ ಕ್ರೇಜಿ ಮೈಂಡ್ಜ್ ಮತ್ತು ನವೀನ್ ಕುಮಾರ್ ನಿರ್ವಹಿಸಿದ್ದಾರೆ. ಮಿಲಿಂದ್ ರಾಸೋ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಎಲ್, ಹನುಮಂತ್ ರಾವ್ ಎ ಮತ್ತು ಸ್ವರ್ಣಲತಾ ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಥೆ: ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಸಾಫ್ಟವೇರ್ ಇಂಜಿನಿಯರ್. ಚಿತ್ರದಲ್ಲಿ ನಾಯಕ ಚಿಕ್ಕ ವಯಸ್ಸಿಂದಲೂ ಮದುವೆ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿರುತ್ತಾನೆ. ಆದರೆ, ಹುಡುಗಿ ಮಾತ್ರ ಸಿಗುವುದಿಲ್ಲ. ಈ ಚಡಪಡಿಕೆಯೇ ಸಿನಿಮಾ ಕಥೆ. ಈ ಸಿನಿಮಾದಲ್ಲಿ ಮಿಲನಾ ಅವರದ್ದು ತಿರುವು ಕೊಡುವಂತಹ ಪಾತ್ರ.